ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಖಡಕ್ ಭಾಷಣಗಳಿಗೆ ಪ್ರಸಿದ್ಧರು.  ಆದರೆ ಅವರ ಹಾಸ್ಯ ಪ್ರಜ್ಞೆಯೂ ಅಷ್ಟೇ ಪ್ರಖರವಾದದ್ದು. ತಮ್ಮ ಸೋಶಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಎರಡು ಪೋಟೋಗಳಲ್ಲಿ ಅನೇಕ ವಿಚಾರ ಹೇಳುವ ಪ್ರಯತ್ನ ಮಾಡಿದ್ದಾರೆ.

ನವದೆಹಲಿ[ಜೂ. 06]ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜವಳಿ ಸಚಿವೆ ಸ್ಮೃತಿ ಇರಾನಿ 5 ಲಕ್ಷಕ್ಕೂ ಅಧಿಕ ಇಸ್ಟಾಗ್ರ್ಯಾಮ್ ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಹಿಂದಿನ ದಿನಗಳಿಗೆ ಹೋಗಿರುವ ನಾಯಕಿ ಹಳೆ ಪೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದು ಅದಕ್ಕೆ ಕ್ಯಾಪ್ಶನ್ ಸಹ ಬರೆದಿದ್ದಾರೆ.

ಬಿಜೆಪಿ ನಾಯಕಿಯೊಬ್ಬರೊಂದಿಗೆ ಮಾತುಕತೆಯಲ್ಲಿರುವ ಪೋಟೋ ಹಂಚಿಕೊಂಡು ಅದಕ್ಕೆ , ’ನೋಡು ನೋಡುತ್ತಿದ್ದಂತೆ ಏನೆಲ್ಲಾ ಆಯಿತು’ ಎಂದು ಬರೆದಿದ್ದಾರೆ. ಇದಕ್ಕೆ 50 ಸಾವಿರಕ್ಕೂ ಅಧಿಕ ಲೈಕ್ ಗಳು ಬಂದಿವೆ.

ಹತ್ಯೆಗೀಡಾದ ಕಾರ್ಯಕರ್ತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ

ತಮ್ಮದೇ ವಿಡಿಯೋ ಕ್ಲಿಪ್ ಗೆ ಹಾಸ್ಯದ ಟಚ್ ನೀಡಿ, ವೈದ್ಯರು ತೂಕ ಕಡಿಮೆ ಮಾಡಿ ಎಂದಾಗ.. ಎಂದು ಹೇಳುತ್ತಾ ಮುಂದೆ ಸಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ಚಿತ್ರವನ್ನೇ ಅಪ್ ಲೋಡ್ ಮಾಡಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತ ತೂಕದ ವಿಚಾರವನ್ನು ಮಾತನ್ನಾಡಿದ್ದಾರೆ.

View post on Instagram
View post on Instagram