ಶಿರಸಿ[ಜ.30]  ‘ಅಪ್ಪ ಮುಸಲ್ಮಾನ, ತಾಯಿ ಕ್ರಿಶ್ಚಿಯನ್‌ ಆದರೆ ಮಗ ಬ್ರಾಹ್ಮಣ ಜಗತ್ತಿನ ಲ್ಯಾಬರೇಟರಿಗಳಲ್ಲಿ ಕಾಣದ ಇಂತಹ ಅಪರೂಪದ ಹೈಬ್ರಿಡ್  ಕಾಂಗ್ರೆಸ್ ಲ್ಯಾಬೋರೇಟರಿಯಲ್ಲಿ ಮಾತ್ರ ಕಾಣಲು ಸಾಧ್ಯವಿದೆ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೆಸರು ಹೇಳದೆ ರಾಹುಲ್ ಗಾಂಧಿ ಅವರ ಕುರಿತಾಗಿ ಮಾತನಾಡಿದ್ದಾರೆ.

ರಫೆಲ್ ಸ್ಪೆಲ್ಲಿಂಗ್ ತಿಳಿಯದ ರಾಹುಲ್ ಗಾಂಧಿ ರಫೆಲ್ ಎಂದರೆ ಮೂರು ಗಾಲಿ ಸೈಕಲ್ ಅಂದುಕೊಂಡಿದ್ದಾರೆ.  ದೇಶದ ಹಾಗೂ ಧರ್ಮದ ಕುರಿತು ಗೌರವ ಇಲ್ಲದವರು ಹೇಳುವ ಹಸಿ ಸುಳ್ಳನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದೇಶಕ್ಕೆ ಕಾಂಗ್ರೆಸ್ ತಿರುಗಿ ಬರಲಾದ ಪ್ರದೇಶಕ್ಕೆ ಬೀಳ್ಕೊಡಲಿದ್ದೇವೆ ಎಂದರು.

‘ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು'

ಬಿಜೆಪಿ ಸೇರ್ಪೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಇರದ ಹೈಬ್ರಿಡ್ ತಳಿ, ಕಾಂಗ್ರೆಸ್ ಲ್ಯಾಬ್ ನಲ್ಲಿ ಮಾತ್ರ ಇದ್ದು, ಅದು ರಾಹುಲ್ ಗಾಂಧಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರೆ.

ಮೇ ತಿಂಗಳ ಅಂತ್ಯದೊಳಗೆ ಸಾಮೂಹಿಕ ರಾಜಕೀಯ ಆತ್ಮಹತ್ಯೆ ಕಾರ್ಯಕ್ರಮ ನಡೆಯಲಿದೆ.  ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ರಸ್ತೆ, ಬಾವಿ, ಅರಣ್ಯದಲ್ಲಿ ಗಿಡ ನೆಟ್ಟರೂ ಪರ್ಸಂಟೇಜ್ ಕೇಳುವ ಪರ್ಸಂಟೇಜ್ ಪಾಂಡೆ ಎಂದು ಟೀಕೆ ಮಾಡಿದ್ದಾರೆ.