ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕೊಡಗಿನಲ್ಲಿ ಭಾಷಣ ಮಾಡಿದ್ದಾರೆ. ಈ ಬಾರಿ ಕಮ್ಯೂನಿಷ್ಟರ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಕೊಡಗು[ಜ.27] ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು ಕಮ್ಯೂನಿಸ್ಟರು. ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು. ಇತಿಹಾಸ ಬರೆಯೋದೆ ಹೀಗೆ, ಪೌರುಷ ಇದ್ರೆ ಇತಿಹಾಸ ಬರೆಯಿರಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಮಾವೇಶದಲ್ಲಿ ಮಾತನಾಡಿ, ದೇವರಿಗೆ ದುರ್ಬಲರೆ ಬೇಕು,ಅದಕ್ಕೆ ಕುರಿ-ಕೋಳಿ ಬಲಿ ನೀಡಲಾಗುತ್ತದೆ. ಆನೆ ಹುಲಿಯನ್ನು ದೇವರಿಗೆ ಬಲಿಕೊಡ್ತಾರಾ, ನೀವು ಕೋಳಿ ಕುರಿ ಆಗಬೇಡಿ ದುರ್ಬಲರಾಗದೇ ಶೌರ್ಯ ವ್ಯಕ್ತಿಗಳಾಗಿ ಬೆಳೆಯಿರಿ ಎಂದರು.
ಕೇಂದ್ರ ಸಚಿವ ಹೆಗಡೆಗೆ ವೇದಿಕೆಯಿಂದ ಕೆಳಗಿಳಿಯಲು ಬಿಎಸ್‌ವೈ ಸೂಚನೆ ನೀಡಿದ್ರಾ?
ಹಿಂದೂ ಸಮಾಜ ಒಟ್ಟಾಗಿ ನಿಲ್ಲದಿದ್ರೆ ಮುಂದೆ ಕಷ್ಟವಾಗುತ್ತದೆ. ಕುತುಬ್ ಮಿನಾರ್ ಕಟ್ಟಿದ್ದು ಮುಸಲ್ಮಾನರಲ್ಲ. ಅದು ನಿರ್ಮಾಣವಾಗಿದ್ದು ಜೈನರ ಕಾಲದಲ್ಲಿ. ತಾಜ್ ಮಹಲ್ ಮುಸಲ್ಮಾನ ಕಟ್ಟಿಸಿದ್ದಲ್ಲ. ಹಲಫನಾಮದಲ್ಲಿ ಷಹಜಹಾನ್ ಸ್ವತಃ ಇದನ್ನು ಹೇಳಿದ್ದಾನೆ. ರಾಜಾ ಜಯಸಿಂಹನಿಂದ ಕೊಂಡುಕೊಂಡ ಕಟ್ಟಡ ಅದಾಗಿತ್ತು. ಬಳಿಕ ತೇಜೋ ಮಹಾಲಯ ತಾಜ್ ಮಹಲ್ ಆಯ್ತು ಎಂದು ಇತಿಹಾಸದ ವಿಚಾರ ಮಾತನಾಡಿದರು.
ಮಸೀದಿ ಬಿದ್ರೆ ಎಲ್ಲಾ ಬರ್ತಾರೆ,ದೇವಸ್ಥಾನ ಬಿದ್ರೆ ಯಾರು ಬರಲ್ಲ. ದೇವಾಲಯ ಕೇವಲ ಕಟ್ಟಡ ಅಲ್ಲ, ಅದು ಭಾವನೆಗಳ ಆಲಯ. ಶಿವ ಅಂದ್ರೆ ಲಿಂಗವಾ? ಸೃಷ್ಟಿಯ ಧನಾತ್ಮಕ ಶಕ್ತಿಗೆ ಶಿವ ಅಂತ ಕರೀತಾರೆ. ಶಿವನಿಗೆ ಯಾವುದೇ ಆಕಾರ ಇಲ್ಲ, ಆಕಾರಗಳಿಲ್ಲದ್ದೇ ಶಿವ ಎಂದು ವ್ಯಾಖ್ಯಾನಿಸಿದರು. ಕೊಡಗಿನಲ್ಲಿ ನಡೆಯೋ ಸಮಾಜಘಾತಕ ಚಟುವಟಿಕೆಯನ್ನು ನೀವೆ ಗಮನಿಸಬೇಕು. ಮನೆಮುರುಕರು ಕೊಡಗು ಪ್ರವೇಶಿಸಿದರೆ ಮಣ್ಣಲ್ಲಿ ಮಣ್ಣಾಗಿಸಿ ಎಂದು ಹೇಳಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 27, 2019, 4:59 PM IST