ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿಯವರು ತಮ್ಮ ನೆಚ್ಚಿನ ಶಿಷ್ಯ ಅನಂತಕುಮಾರ್ ಅವರ ಅಗಲಿಕೆಗೆ  ಕಂಬನಿ ಮಿಡಿದಿದ್ದಾರೆ.

ನವದೆಹಲಿ, [ನ. 12]: ಬಿಜೆಪಿಯ ಭೀಷ್ಮನೆಂದೇ ಕರೆಯುವ ಎಲ್.ಕೆ.ಅಡ್ವಾಣಿಯವರು ತಮ್ಮ ನೆಚ್ಚಿನ ಶಿಷ್ಯ ಅನಂತಕುಮಾರ್ ರವರ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಂತಕುಮಾರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಕೇಂದ್ರ ಸಚಿವ ಅನಂತಕುಮಾರ್ ರವರ ಅಕಾಲಿಕ ಸಾವಿನ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. 

ಅವರು ಬಡವರ ಮತ್ತು ಕೆಳವರ್ಗದ ನಾಯಕರೆಂದು ಖ್ಯಾತಿ ಪಡೆದಿದ್ದರು. ಇದೀಗ ಅವರ ಸಾವು ನಮಗೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿತ್ತೇನೆ ಎಂದರು.

ಅನಂತಕುಮಾರ್ ಅವರು ಅಡ್ವಾಣಿ ಶಿಷ್ಯರೆಂದೇ ಹೆಸರು ಪಡೆದುಕೊಂಡಿದ್ದರು. ಅಲ್ಲದೇ ಎಲ್ಲರೂ ಅವರನ್ನು ಅಡ್ವಾಣಿಯವರ ಮನೆ ಮಗನೆಂದೂ ಕರೆಯುತ್ತಿದ್ದರು.