ಕೇಂದ್ರ ಸರ್ಕಾರ 2019ನೇ ಸಾಲಿನ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ಕರ್ನಾಟಕಕ್ಕೆ ಕೇವಲ 5 ಪದ್ಮಶ್ರೀ ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರು, [ಜ.25]: 2019ನೇ ಸಾಲಿನ 4 ಪದ್ಮವಿಭೂಷಣ, 14 ಪದ್ಮಭೂಷಣ ಹಾಗೂ 94 ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಪೈಕಿ ಪದ್ಮಶ್ರೀ ಪ್ರಶಸ್ತಿಗೆ ಕರ್ನಾಟಕದ ಐವರು ಸಾಧಕರು ಪಾತ್ರರಾಗಿದ್ದಾರೆ.
ಕರ್ನಾಟಕ ಪೊಲೀಸರಿಗೆ ಈ ಬಾರಿ ಇಲ್ಲ ರಾಷ್ಟ್ರಪತಿ ಪದಕ..ಕಾರಣ ನಮ್ಮವರೆ!
ಸಾಮಾಜಿಕ ಕ್ಷೇತ್ರ ಸಾಧಕಿ ಸಾಲುಮರದ ತಿಮ್ಮಕ್ಕ[ಪರಿಸರ] , ಪುರಾತತ್ವ ಕ್ಷೇತ್ರ ಸಾಧಕಿ ಶಾರದಾ ಶ್ರೀನಿವಾಸನ್ [ಪ್ರಾಚ್ಯ ವಸ್ತು ಅಧ್ಯಯನ], ಡ್ಯಾನ್ಸರ್ ಹಾಗೂ ಖ್ಯಾತ ನಟ ಪ್ರಭುದೇವ ಹಾಗೂ ಸರೋದ್ ವಾದಕ ರಾಜೀವ್ ತಾರಾನಾಥ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಣಬ್ ಮುಖರ್ಜಿ ಸೇರಿ ಮೂವರಿಗೆ ಭಾರತ ರತ್ನ
ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ:
ರಾಜ್ಯದ ಸಾಧಕರಿಗೆ ಪದ್ಮವಿಭೂಷಣ ಇಲ್ಲ.. ಪದ್ಮಭೂಷಣವೂ ಸಿಗಲಿಲ್ಲ. ಅಷ್ಟೇ ಅಲ್ಲದೇ ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಗೌರವ ಸಿಗಲಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 25, 2019, 10:18 PM IST