ನಗರದ ಪಾದಚಾರಿ ಸುರಂಗ ಮಾರ್ಗಗಳು ಅವೈ ಜ್ಞಾನಿಕವಾಗಿದ್ದು, ಅವುಗಳನ್ನು ಬಂದ್‌ ಮಾಡಿ, ಸ್ಕೈ ವಾಕ್‌ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಎರಡು ಅವೈಜ್ಞಾನಿಕ ಮ್ಯಾಜಿಕ್‌ ಬಾಕ್ಸ್‌ಗಳನ್ನೂ ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು(ಮಾ.09): ನಗರದ ಪಾದಚಾರಿ ಸುರಂಗ ಮಾರ್ಗಗಳು ಅವೈ ಜ್ಞಾನಿಕವಾಗಿದ್ದು, ಅವುಗಳನ್ನು ಬಂದ್‌ ಮಾಡಿ, ಸ್ಕೈ ವಾಕ್‌ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೇ ಎರಡು ಅವೈಜ್ಞಾನಿಕ ಮ್ಯಾಜಿಕ್‌ ಬಾಕ್ಸ್‌ಗಳನ್ನೂ ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾಜ್‌ರ್‍ ಬುಧವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕಾವೇರಿ ಥಿಯೇಟರ್‌ ಮತ್ತು ಲೀ ಮೆರಿಡಿಯನ್‌ ಹೊಟೇಲ್‌ ಬಳಿಯ ಮ್ಯಾಜಿಕ್‌ ಬಾಕ್ಸ್‌ ಬಂದ್‌ ಮಾಡಲು ನಿರ್ಧರಿಸಲಾಗಿದ್ದು, ಮಳೆ ಬಂದರೆ ಮ್ಯಾಜಿಕ್‌ ಬಾಕ್ಸ್‌ಗಳಲ್ಲಿ ನೀರು ತುಂಬಿ ವಾಹನಗಳು ಮುಳುಗಿ ಹೋಗುತ್ತಿವೆ. ಹೀಗಾಗಿ ಮ್ಯಾಜಿಕ್‌ ಬಾಕ್ಸ್‌ ಮತ್ತು ಸುರಂಗ ಮಾರ್ಗಗಳನ್ನು ಮುಚ್ಚದೇ ಬೇರೆ ಮಾರ್ಗವಿಲ್ಲ. ಬದಲಿ ವ್ಯವಸ್ಥೆ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಇದೇ ಮಾರ್ಗದಲ್ಲಿ ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣ ಮಾಡಿದ್ದರೆ ಈ ಎಲ್ಲ ಸಮಸ್ಯೆಗಳೂ ನಿವಾರಣೆ ಆಗುತ್ತಿದ್ದವು. ಆದರೆ. ಇದೀಗ ಪರಾರ‍ಯಯ ಪರಿಹಾರೋಪಾಯ ಹುಡುಕಬೇಕಿದೆ. ಪಾದಚಾರಿ ಸುರಂಗ ಮಾರ್ಗಗಳು ವೈಜ್ಞಾನಿಕವಾಗಿಲ್ಲದ ಕಾರಣ ಸ್ಕೈವಾಕ್‌ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ನಗರದಲ್ಲಿ 1,500 ಬಸ್‌ ತಂಗುದಾಣ ಹಾಗೂ 400 ಶೌಚಾಲಯ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ ಎಂದು ಸಚಿವ ಜಾಜ್‌ರ್‍ ತಿಳಿಸಿದರು.

ಕಿನೋ ಥಿಯೇಟರ್‌ ಸಮಸ್ಯೆಗೆ ಪರಿಹಾರ:

ಕಿನೋ ಥಿಯೇಟರ್‌ ಬಳಿ ರೈಲ್ವೆ ಮೇಲ್ಸೆತುವೆಯಿಂದ ಅಪಾರ ಪ್ರಮಾಣದ ನೀರು ಕೆಳಕ್ಕೆ ಧುಮುಕುತ್ತಿದೆ. ಹೀಗಾಗಿ ಕೆಳಭಾಗದ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದೆ. ಇಲ್ಲಿ ರಸ್ತೆಗೆ ಬೀಳುವ ನೀರನ್ನು ಪೈಪ್‌ಗಳ ಮೂಲಕ ಮಂತ್ರಿ ಮಾಲ್‌ವರೆಗೂ ಕೊಂಡೊಯ್ದು ಅಲ್ಲಿ ಹೊರಕ್ಕೆ ಬಿಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ರಾತ್ರಿ ವೇಳೆಯಲ್ಲಿ ಮಾತ್ರ ಕಾಮಗಾರಿ ನಡೆಸಬೇಕಿರುವುದರಿಂದ ವಿಳಂಬವಾಗಿದ್ದು, ಕಾಮಗಾರಿ ಮುಗಿದ ಬಳಿಕ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದರು. 
ಮಳೆ ಸಮಸ್ಯೆ ಕೇವಲ ಬೆಂಗಳೂರು ಮಾತ್ರವಲ್ಲ ಚೆನ್ನೈ, ಮುಂಬೈನಂತಹ ನಗರಗಳನ್ನೂ ಕಾಡುತ್ತದೆ ಎಂದ ಸಚಿವ ಜಾಜ್‌ರ್‍, ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವರದಿ: ಕನ್ನಡ ಪ್ರಭ