120ಕ್ಕಿಂತಲೂ ಹೆಚ್ಚು ರಾಷ್ಟ್ರಗಳ ಬೆಂಬಲದೊಂದಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಒಡಂಬಡಿಕೆಯನ್ನು ವಿಶ್ವಸಂಸ್ಥೆ ಶುಕ್ರವಾರ ಅಂಗೀಕರಿಸಿದೆ. ಆದರೆ ಭಾರತ ಸೇರಿದಂತೆ ಪರಮಾಣು ಅಸ್ತ್ರಗಳನ್ನು ಹೊಂದಿರುವ ಇತರ ರಾಷ್ಟ್ರಗಳು ಚರ್ಚೆಯಿಂದ ದೂರವುಳಿದಿವೆ.

ವಿಶ್ವಸಂಸ್ಥೆ (ಜು. 08): 120ಕ್ಕಿಂತಲೂ ಹೆಚ್ಚು ರಾಷ್ಟ್ರಗಳ ಬೆಂಬಲದೊಂದಿಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಒಡಂಬಡಿಕೆಯನ್ನು ವಿಶ್ವಸಂಸ್ಥೆ ಶುಕ್ರವಾರ ಅಂಗೀಕರಿಸಿದೆ. ಆದರೆ ಭಾರತ ಸೇರಿದಂತೆ ಪರಮಾಣು ಅಸ್ತ್ರಗಳನ್ನು ಹೊಂದಿರುವ ಇತರ ರಾಷ್ಟ್ರಗಳು ಚರ್ಚೆಯಿಂದ ದೂರವುಳಿದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 20 ವರ್ಷಗಳಿಂದ ಚರ್ಚೆಯಾಗುತ್ತಿರುವ ಪರಮಾಣು ‘ದಿ ಟ್ರೀಟಿ ಆಫ್ ದಿ ಪ್ರೊಹಿಬಿಶನ್ ಆಫ್ ನ್ಯೂಕ್ಲಿಯರ್ ವೆಪನ್ಸ್’ (ಪರಮಾಣು ಶಸ್ತ್ರಾಸ್ತ್ರ ನಿಷೇಧ ಒಡಂಬಡಿಕೆ) ಈ ಮೂಲಕ ಕೊನೆಗೂ ಅಂಗೀಕಾರಗೊಂಡಿದೆ.

ನೆದರ್ಲ್ಯಾಂಡ್ ಈ ಒಪ್ಪಂದವನ್ನು ವಿರೋಧಿಸಿದರೆ, ಸಿಂಗಾಪುರ ತಟಸ್ಥವಾಗಿಯುಳಿದಿದೆ. 122 ದೇಶಗಳು ಒಪ್ಪಂದದ ಪರವಾಗಿ ತಮ್ಮ ಮತವನ್ನು ಚಲಾಯಿಸಿವೆ.

ಈಗಾಗಲೇ ಪರಮಾಣು ಶಸ್ತ್ರಗಳನ್ನು ಹೊಂದಿರುವ ಭಾರತ ಸೇರಿದಂತೆ, ಪಾಕಿಸ್ತಾನ, ಅಮೆರಿಕಾ, ಚೀನಾ, ರಷ್ಯಾ, ಇಸ್ರೇಲ್, ಫ್ರಾನ್ಸ್, ಹಾಗೂ ಉತ್ತರ ಕೊರಿಯಾ ಚರ್ಚೆಯಲ್ಲಿ ಭಾಗವಹಿಸದೇ ದೂರವುಳಿದಿವೆ.