ಮಧ್ಯಪ್ರದೇಶದ ಉಜ್ಜಯನಿ ಜಿಲ್ಲೆಯ ಗೌರವ್ ರಘುವಂಶಿ ಅವರ ಗಿರ್ ತಳಿಯ 'ರಾಧೆ' ಹಸು ದಿನಕ್ಕೆ 19.760 ಲೀಟರ್ ಹಾಲು ನೀಡುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಈ ಸಾಧನೆಗಾಗಿ ಹಸುವಿನ ಮಾಲೀಕರಿಗೆ ಮುಖ್ಯಮಂತ್ರಿಗಳಿಂದ ಸನ್ಮಾನ ಹಾಗೂ ಒಂದು ಲಕ್ಷ ರೂಪಾಯಿ ಬಹುಮಾನ ಒಲಿಯಲಿದೆ.

ಮಧ್ಯ ಪ್ರದೇಶ: ಇಲ್ಲಿನ ಗಿರ್‌ ಥಳಿಯ ರಾಧೆ ಎಂಬ ಹಸು ದೇಶದ ಗಮನ ಸೆಳೆದಿದೆ. ‌ ಇದು ದಿನಕ್ಕೆ ಸರಾಸರಿ 19.760 ಲೀಟರ್‌ ಹಾಲನ್ನು ನೀಡುತ್ತಿದೆ. ಆ ಮೂಲಕ ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದೆ.

ಉಜ್ಜಯನಿ ಜಿಲ್ಲೆಯ ತಲೋಡ್‌ ಗ್ರಾಮ. ಈ ಗ್ರಾಮದಲ್ಲಿ ಗೌರವ್‌ ರಘುವಂಶಿ ಅನ್ನೋರು ಹೈನುಗಾರಿಕೆ ಮಾಡುತ್ತಿದ್ದಾರೆ. ಇವರ ಮನೆಯಲ್ಲಿ ರಾಧೆ ಎಂಬ ಹುಸು ಇದೆ. ಈ ಹಸು ಮಧ್ಯಪ್ರದೇಶ ರಾಜ್ಯದಲ್ಲಿಯೇ ಅತೀ ಹೆಚ್ಚು ಹಾಲನ್ನು ಉತ್ಪಾದಿಸುತ್ತಿದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಈ ಹಿನ್ನೆಲೆಯಲ್ಲಿ ನವೆಂಬರ್‌ 19 ರಂದು ನಡೆಯುವ ಗೋವರ್ಧನ್‌ ಪರ್ವ್‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಹಸುವಿನ ಮಾಲೀಕ ಗೌರವ್‌ ರಂಘುವಂಶಿಗೆ ಸನ್ಮಾನ ಮಾಡಲಿದ್ದಾರೆ.

ಏನಿದು ಸ್ಪರ್ಧೆ? ಪಶು ಸಂಗೋಪನೆ ಮತ್ತು ಡೈರಿ ಇಲಾಖೆಯು ಗೋಪಾಲ್‌ ಕೃಷ್ಣ ಗ್ರಾಮ ಪ್ರಶಸ್ತಿಗಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಅಕ್ಟೋಬರ್ 27 ರಿಂದ 31 ರವರೆಗೆ ರಾಜ್ಯದ ವೃಂದಾವನ ಗ್ರಾಮಗಳಲ್ಲಿ ಹಾಲು ಉತ್ಪಾದನಾ ಸ್ಪರ್ಧೆ ನಡೆಸಿತ್ತು. ಈ ಸ್ಪರ್ಧೆಯಲ್ಲಿ ರಾಧಾ ಅತಿ ಹೆಚ್ಚು ಹಾಲು ಉತ್ಪಾದಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇನ್ನು ಈ ಗೋವು ಇಷ್ಟೊಂದು ಹಾಲು ನೀಡಲು ಕಾರಣ ಅದರ ಆರೈಕೆ ಮತ್ತು ಪಾಲನೆ ಆಗಿದೆ.

ಈ ರಾಧಾ ಮಾಲೀಕ ಗೌರವ್‌ ರಘುವಂಶಿ ಅವರಿಗೆ ಕೇವಲ ಹಸು ಅಲ್ಲ. ಬದಲಾಗಿ ಕುಟುಂಬದ ಸದಸ್ಯೆಯೇ ಆಗಿದ್ದಾಳೆ. ಅವರು ತಮ್ಮ ಹಸು ರಾಧಾ ಬಗ್ಗೆ ಮಾಹಿತಿ ನೀಡಿ.. ನಾನು ಸಾಂಪ್ರದಾಯಿಕ ಹಸು ಸಾಕಣೆ ಮಾಡುತ್ತಿದ್ದೇನೆ. ನಾನು ಗಿರ್‌ ತಳಿಯ ಹಸುವನ್ನು ಖರೀದಿಸಿದ್ದೆ. ನಂತರ ಅದಕ್ಕೆ ರಾಧೆ ಎಂದು ನಾಮಕರಣ ಮಾಡಿದೆ. ಆಕೆಗೆ ನಾನು ಸಮತೋಲಿನ ಆಹಾರ, ಸರಿಯಾದ ಆರೈಕೆ ಮಾಡುತ್ತಿದ್ದೇನೆ. ನಿತ್ಯ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಅದು ದಿನಕ್ಕೆ 19 ಲೀಟರ್‌ ಹಾಲು ಉತ್ಪಾದಿಸಿತು. ಆ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದೆ. ನನಗೆ ರಾಧೆ ಮೇಲೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ.

ಎಷ್ಟು ರೂಪಾಯಿ ಬಹುಮಾನ?

ಮೊದಲ ಸ್ಥಾನಗಳಿಸಿದ ರಾಧೆಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣವನ್ನು ಬಹುಮಾನದ ರೂಪದಲ್ಲಿ ಸರ್ಕಾರವೇ ನೀಡಲಿದೆ. ಇನ್ನು ಎರಡನೇ ಸ್ಥಾನ ಪಡೆದ ಹಸುವಿಗೆ 50 ಸಾವಿರ ರೂಪಾಯಿ ಮೂರನೇ ಸ್ಥಾನ ಪಡೆದ ಹಸುವಿಗೆ 25 ಸಾವಿರ ರೂಪಾಯಿ ಸಿಗಲಿದೆ. ನಗದು ಹಣವನ್ನು ನೇರವಾಗಿ ಬ್ಯಾಂಕ್‌ಗಳ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಇನ್ನೊಂದು ವಿಶೇಷ ಅಂದ್ರೆ ಹಾಲು ಉತ್ಪಾದನೆಯಲ್ಲಿ ಮಧ್ಯ ಪ್ರದೇಶವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿನ ಪಶು ಸಂಗೋಪನೆ ಇಲಾಖೆಯು ಜಾನುವಾರುಗಳ ಸಾಕಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿಯನ್ನ ಬಲಪಡಿಲು ಇಂತಹ ಪ್ರೋತ್ಸಾಹ ಮಾಡಿಕೊಂಡು ಬರುತ್ತಿದೆ.