ನವದೆಹಲಿ: ಟ್ರಾಯ್‌ ಮುಖ್ಯಸ್ಥ ಆರ್‌.ಎಸ್‌. ಶರ್ಮಾ ತಮ್ಮ ಆಧಾರ್‌ ನಂಬರ್‌ ಅನ್ನು ಸಮಾಜಿಕ ಜಾಲತಾಣಗಳಲ್ಲಿ ಹಾಕಿ ಹ್ಯಾಕ್‌ ಮಾಡುವಂತೆ ಸವಾಲು ಹಾಕಿದ ಬೆನ್ನಲ್ಲೇ, ಆಧಾರ್‌ ನಂಬರ್‌ ಹಂಚಿಕೊಳ್ಳುವುದರಿಂದ ಆಗುವ ಒಳಿತು, ಕೆಡುಕಿನ ಬಗ್ಗೆ ಜಾಗೃತಿ ಮೂಡಿಸಲು ಆಧಾರ್‌ ಪ್ರಾಧಿಕಾರ- ಯುಐಡಿಎಐ ಚಿಂತನೆ ನಡೆಸಿದೆ.

ಆಧಾರ್‌ ನಂಬರ್‌ ಅನ್ನು ಫೇಸ್‌ಬುಕ್‌, ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಪಾನ್‌ ನಂಬರ್‌, ಬ್ಯಾಂಕ್‌ ಅಕೌಂಟ್‌ ಬಂಬರ್‌, ಕ್ರೆಡಿಟ್‌ ಕಾರ್ಡ್‌ ನಂಬರ್‌ ನಂತಹ ವೈಯಕ್ತಿಕ ಮಾಹಿತಿಗಳನ್ನು ನೀಡಿದ್ದಕ್ಕೆ ಸಮ ಎಂಬ ಎಚ್ಚರಿಕೆ ನೀಡಲು ಯುಐಡಿಎಐ ಉದ್ದೇಶಿಸಿದೆ.

ಯಾವುದೇ ಅಂಜಿಕೆ ಇಲ್ಲದೇ ಆಧಾರ್‌ ನಂಬರ್‌ ಅನ್ನು ಬಳಸಬುದಾಗಿದೆ ಎಂಬುದನ್ನು ಜನರಿಗೆ ತಿಳಿಸುವ ಅಗತ್ಯವಿದೆ. ಈ ಸಂಬಂಧ ಪ್ರಶ್ನೋತ್ತರ ಮಾಲಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಯುಐಡಿಎಐ ಸಿಇಒ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ.