ತಲೆ ಮೇಲೆ ಬುಟ್ಟಿ ಇಟ್ಟು ವ್ಯಾಪಾರ ಮಾಡ್ತಿದ್ದವರಿಗೆ ಈಗ 37 ಕಡೆ ಫಿಶ್ ಮಾರ್ಕೆಟ್

ಕರಾವಳಿ ಭಾಗದಲ್ಲಿ ಮೀನುಗಾರಿಕೆ ಮತ್ತು ಮಹಿಳಾ ವ್ಯಾಪಾರಿಗಳ ನಂಟು ದೊಡ್ಡದು. ಗ್ರಾಹಕರೆಲ್ಲರನ್ನೂ ಅಣ್ಣಾ, ಅಕ್ಕಾ ಎಂದು ಕರೆದು ಮೀನು ಮಾರುವ ಇವರು ಮಾಡಿದ ಸಾಧನೆ ಸ್ಫೂರ್ಥಿದಾಯಕ. ಇವರು ಉಡುಪಿಯ ರೈತ ರತ್ನ ಬೇಬಿ ಸಾಲ್ಯಾನ್

Udupi Baby Salian honored with Suvarna Kannadaprabha Raita Ratna award for fisheries dpl

ರೈತ ರತ್ನ ಬೇಬಿ ಸಾಲ್ವಾನ್
ವಿಭಾಗ: ಮೀನುಗಾರಿಕೆ 
ಊರು: ಪಾಲ್ಮಠ, ಉಡುಪಿ 

2010ರ ಫೆ. 2ರಂದು ಸ್ಥಾಪನೆಯಾಗಿ ಯಶಸ್ವಿಯಾಗಿ 11ನೇ ವರ್ಷಕ್ಕೆ ಕಾಲಿಟ್ಟಿರುವ ಮಹಿಳಾ ಮೀನು ವ್ಯಾಪಾರಿಗಳ ಸಂಘ. ಇದರ ರೂವಾರಿ ಬೇಬಿ ಸಾಲ್ವಾನ್. ಸುಮಾರು 2000 ಮಂದಿ ಮಹಿಳೆಯರು ಸಂಘದ ಸದಸ್ಯರಾಗಿದ್ದು, ಉಡುಪಿ, ಕುಂದಾಪುರ ಭಾಗದ 37 ಕಡೆಗಳಲ್ಲಿ ಮಾರ್ಕೆಟ್‌ ತೆರೆದು ಹಸಿ ಮೀನು ವ್ಯಾಪಾರ ಮಾಡುತ್ತಿದ್ದಾರೆ.

ಸಂಘದ ಮೂಲಕ ಸದಸ್ಯರಿಗೆ ಆರೋಗ್ಯ, ಶಿಕ್ಷಣಕ್ಕಾಗಿ ಸಾಲ ಸೌಲಭ್ಯ, ಸೂಕ್ತ ಮಾರಾಟ ಜಾಲ ನಿರ್ಮಾಣ ಮಾಡಿಕೊಂಡು ಮೀನು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.

ಸಾಧನೆಯ ವಿವರ: 

ಉಡುಪಿ ಸುತ್ತಮುತ್ತಲೂ ಬಿಡಿಬಿಡಿಯಾಗಿ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುತ್ತಿದ್ದ, ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತು ಊರೂರುಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರನ್ನು ಒಂದಾಗಿಸಿ ಒಂದೇ ಸೂರಿನಡಿಯಲ್ಲಿ ವ್ಯಾಪಾರ ಮಾಡಲು ಸಹಾಯವಾಗುವಂತೆ ಸಂಘವನ್ನು ಕಟ್ಟಿ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಸಂಘದ ಮತ್ತು ಬೇಬಿ ಅವರ ಸಾಧನೆ. ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಸಂಘದ, ಸದಸ್ಯರಿಗೆ ಅನುಕೂಲವಾಗುವಂತಹ ಹಲವಾರು ಕಾರ್ಯಗಳನ್ನು ಮಾಡಿಸಿಕೊಂಡಿದ್ದಾರೆ.

ಗಮನಾರ್ಹ ಅಂಶ:

ಪ್ರತಿ ತಿಂಗಳ 1ನೇ ತಾರೀಖಿನಂದು ಮೀನು ವ್ಯಾಪಾರಕ್ಕೆ ರಜೆ. ಆ ದಿನ ಸಂಘದ ಸದಸ್ಯರು ಒಟ್ಟಾಗಿ ಸೇರುತ್ತಾರೆ. ಹಣಕಾಸಿನ ವಿಚಾರದಿಂದ ಹಿಡಿದು ಎಲ್ಲಾ ಬಗೆಯ ಚರ್ಚೆಯೂ ಈ ವೇಳೆ ಆಗುತ್ತದೆ.

ಜೊತೆಗೆ ಮಾರುಕಟ್ಟೆಯನ್ನು ಶುಚಿ ಮಾಡುವುದು, ಸದ್ಯ ಇರುವಂತಹ ಸಮಸ್ಯೆಗಳನ್ನು ಕುರಿತು ಚರ್ಚೆ ಮಾಡಿ ಅವುಗಳಿಗೆ ಪರಿಹಾರ ಒದಗಿಸುವುದು ಸೇರಿ ಮೀನು ವ್ಯಾಪಾರ ಮತ್ತು ಸದಸ್ಯರ ಬೆಳವಣಿಗೆಗೆ ಪೂರಕವಾಗಿ ಏನೇನು ಆಗಬೇಕೋ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತದೆ.

ಒಂಚೂರು ಜಮೀನಿಲ್ಲ, ಹೈನುಗಾರಿಕೆ ಮಾಡಿ ಇವರು ತಿಂಗಳಿಗೆ ಗಳಿಸ್ತಿರೋದು 45 ಸಾವಿರ

ಮೀನುಗಾರಿಕೆ, ವ್ಯಾಪಾರಿ ಕ್ರಮಗಳ ಕುರಿತಾಗಿ ಚೆನ್ನೈ, ಗುಜರಾತ್, ಮುಂಬೈ ಸೇರಿ ನಾನಾ ಕಡೆಗಳಲ್ಲಿ ನಡೆಯುವ ತರಬೇತಿ ಕಾರ್ಯಾಗಾರಗಳಿಗೆ ಪ್ರತಿ ಬಾರಿಯೂ ಸಂಘವನ್ನು ಆಹ್ವಾನಿಸುತ್ತಾರೆ. ಈ ವೇಳೆ ಆಯ್ದ ಸದಸ್ಯರು ತರಬೇತಿಯಲ್ಲಿ ಭಾಗಿಯಾಗಿ ಅಲ್ಲಿ ತಿಳಿದ ವಿಚಾರಗಳನ್ನು ಇಲ್ಲಿ ಎಲ್ಲರಿಗೂ ತಿಳಿಸುತ್ತಾರೆ.

Latest Videos
Follow Us:
Download App:
  • android
  • ios