ತಮ್ಮ ಮನೆಯಿಂದಲೇ ಎಲ್ಲಂದರಲ್ಲಿಗೆ ಹಾರಾಡಬಹುದು. ಟ್ರಾಫಿಕ್ ಜಂಜಾಟವಿಲ್ಲದೆ ಕಚೇರಿಗೆ ಹೋಗಬಹುದು. ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದು.

ಸ್ಯಾನ್ ಫ್ರಾನ್ಸಿಸ್ಕೋ(ಫೆ.08): ವಿಮಾನದಲ್ಲಿ ಹಾರಾಡುವ ಕನಸು ಕಾಣುತ್ತಿದ್ದವರಿಗೆ ಇನ್ನು ಮುಂದೆ ಕಾರಿನ ಮೂಲಕವೇ ಈಡೇರಿಸಿಕೊಳ್ಳುವ ಸೌಭಾಗ್ಯ ಶೀಘ್ರದಲ್ಲಿಯೇ ಈಡೇರಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಮನೆಯಿಂದಲೇ ಎಲ್ಲಂದರಲ್ಲಿಗೆ ಹಾರಾಡಬಹುದು. ಟ್ರಾಫಿಕ್ ಜಂಜಾಟವಿಲ್ಲದೆ ಕಚೇರಿಗೆ ಹೋಗಬಹುದು. ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದು. ಒಟ್ಟಿನಲ್ಲಿ ದುಬಾರಿ ಖರ್ಚಿನ ವಿಮಾನವಿಲ್ಲದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.

ಇಂತಹದೊಂದು ಕನಸನ್ನು ಜಾಗತಿಕ ಟ್ಯಾಕ್ಸಿ ಸೇವಾ ಕಂಪನಿ ಊಬರ್ ನೆರವೇರಿಸಲಿದೆ. ಈಗಾಗಲೇ ಹಾರುವ ಕಾರುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಊಬರ್ ಉನ್ನತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾಸಾದ ಮಾಜಿ ಇಂಜಿನಿಯರ್ ಒಬ್ಬರನ್ನು ನೇಮಕ ಮಾಡಿಕೊಂಡಿದೆ. ಈ ಹಾರುವ ಕಾರುಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದರೂ ಪರಿಸರ ಸ್ನೇಹಿಯಾಗಿದ್ದು, ಯಾವುದೇ ರೀತಿಯ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ.

ಊಬರ್ ಸಂಸ್ಥೆ ಈಗಾಗಲೇ ವೋಲ್ವೊ ಹಾಗೂ ಡೈಲ್ಮರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಚಾಲಕ ರಹಿತ ಕಾರುಗಳನ್ನು ತಯಾರಿಸುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ ಹಾರುವ ಕಾರುಗಳು ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ವಿಮಾನವಿಲ್ಲದೆ ಕಾರಿನಲ್ಲಿಯೇ ಹಾರುವ ಕನಸನ್ನು ನನಸು ಮಾಡಿಕೊಳ್ಳಬಹುದು.