ಹೋರಿ ಓಡಿಸುವ ಸ್ಪರ್ಧೆ ವೇಳೆ ಹೋರಿ ತಿವಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸೊರಬ ತಾಲೂಕು ಆನವಟ್ಟಿ ಸಮೀಪದ ತಲ್ಲೂರು ಗ್ರಾಮದಲ್ಲಿ ನಡೆದಿದೆ. ಶಕುನವಳ್ಳಿ ಗ್ರಾಮದ ಮನೋಜ್ ಹಾಗೂ ಕೆರವಾಡಿ ಗ್ರಾಮದ ಹೇಮಂತ್ ಮೃತ ದುರ್ದೈವಿಗಳು.
ಶಿವಮೊಗ್ಗ(ಜ.03): ಹೋರಿ ಓಡಿಸುವ ಸ್ಪರ್ಧೆ ವೇಳೆ ಹೋರಿ ತಿವಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸೊರಬ ತಾಲೂಕು ಆನವಟ್ಟಿ ಸಮೀಪದ ತಲ್ಲೂರು ಗ್ರಾಮದಲ್ಲಿ ನಡೆದಿದೆ. ಶಕುನವಳ್ಳಿ ಗ್ರಾಮದ ಮನೋಜ್ ಹಾಗೂ ಕೆರವಾಡಿ ಗ್ರಾಮದ ಹೇಮಂತ್ ಮೃತ ದುರ್ದೈವಿಗಳು.
ಹೋರಿ ಓಡಿಸುವ ಸ್ಪರ್ಧೆ ವೇಳೆ ವೇಗವಾಗಿ ಓಡಿಬಂದ ಹೋರಿ ಇಬ್ಬರು ಯುವಕರಿಗೆ ಕೊಂಬಿನಿಂದ ತಿವಿದಿದೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಇಬ್ಬರು ಯುವಕರೂ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
