ಲಕ್ನೋ[ಜು.05]: ಯುವ ಜನರಲ್ಲಿ ಹುಚ್ಚು ಭಾರೀ ಹಿಡಿಸಿದ ಟಿಕ್‌ಟಾಕ್ ವಿಡಿಯೋ ಆ್ಯಪ್ ಉತ್ತರ ಪ್ರದೇಶದಲ್ಲಿ ಓರ್ವ ಯುವಕನನ್ನು ಬಲಿ ಪಡೆದಿದೆ.

ಟಿಕ್ ವಿಡಿಯೋ ಸ್ಟಂಟ್‌ಗಾಗಿ ನದಿಗೆ ಹಾರಿದ್ದ ಉತ್ತರಪ್ರದೇಶದ ಇಬ್ಬರು ಯುವಕರ ಪೈಕಿ ಓರ್ವ ನೀರು ಪಾಲಾಗಿದ್ದಾನೆ. ಮತ್ತೋರ್ವ ಯುವಕನನ್ನು ರಕ್ಷಣೆ ಮಾಡಲಾಗಿದೆ. ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಲು ಡ್ಯಾನಿಶ್(19) ಹಾಗೂ ಆಶಿಕ್(19) ಎಂಬ ಯುವಕರು ಇಲ್ಲಿನ ಡಿಯೋರಿಯಾ ಜಿಲ್ಲೆಯ ಘಾಟ್ ನಲ್ಲಿರುವ ಛೋಟಿ ಗಾಂಡಕ್ ನದಿಗೆ ಜಿಗಿದಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಕ್ಷಣಾ ಕಾರ್ಯಾಚರಣೆ ಕೈಗೊಂಡು ಡ್ಯಾನಿಶ್ ಎಂಬಾತನನ್ನು ರಕ್ಷಿಸಿದ್ದಾರೆ. ಆದರೆ, ಮತ್ತೋರ್ವ ಯುವಕ ಆಶಿಕ್‌ನ ಸುಳಿವು ಇದುವರೆಗೂ ಪತ್ತೆಯಾಗಿಲ್ಲ.