. ರಂಜಾನ್ ಹಬ್ಬದ ಅಂಗವಾಗಿ ಸೈಯ್ಯದ್ ಆಸೀಫ್ ಎಂಬುವರು ಉಚಿತ ಕೂಪನ್ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಜನಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ.
ಬೆಂಗಳೂರು(ಸೆ.28): ನಗರದಲ್ಲಿ ಉಚಿತ ರೇಷನ್ ಕೂಪನ್'ಗಾಗಿ ಜನರು ಮುಗಿಬಿದ್ದ ಕಾರಣದಿಂದಾಗಿ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ ಇಬ್ಬರು ವೃದ್ಧರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಮಿಟ್ಟಗಾನಹಳ್ಳಿಯಲ್ಲಿ ನಡೆದಿದೆ.
ಆಂಧ್ರದ ಚಿತ್ತೂರು ಮೂಲದ ರೆಹಮತ್ ಉನ್ನೀಸ್ (75), ಅನ್ವರ್ ಪಾಷಾ(65) ಮೃತರು. ರಂಜಾನ್ ಹಬ್ಬದ ಅಂಗವಾಗಿ ಸೈಯ್ಯದ್ ಆಸೀಫ್ ಎಂಬುವರು ಉಚಿತ ಕೂಪನ್ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಜನಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಯ್ಯದ್ ಆಸೀಫ್ ಬಂಧಿಸಿದ್ದಾರೆ.
