ಕುಮಾರಪಟ್ಟಣ: ಒಂದೇ ಸಂಖ್ಯೆ ನಮೂ ದಾಗಿ ರುವ ಆಧಾರ್ ಕಾರ್ಡ್ ಅನ್ನು ಇಬ್ಬರಿಗೆ ವಿತರಣೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಗ್ರಾ.ಪಂ. ವ್ಯಾಪ್ತಿಯ ನಲವಾಗಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಹಾವೇರಿ(ಸೆ.02): ಕುಮಾರಪಟ್ಟಣ: ಒಂದೇ ಸಂಖ್ಯೆ ನಮೂ ದಾಗಿ ರುವ ಆಧಾರ್ ಕಾರ್ಡ್ ಅನ್ನು ಇಬ್ಬರಿಗೆ ವಿತರಣೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಗ್ರಾ.ಪಂ. ವ್ಯಾಪ್ತಿಯ ನಲವಾಗಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಎರಡು ಪ್ರತ್ಯೇಕ ಆಧಾರ್ ಕಾರ್ಡ್‌ಗಳನ್ನು ಇಬ್ಬರು ಮಹಿಳೆಯರಿಗೆ ನೀಡಲಾಗಿದೆ. ಎರಡಕ್ಕೂ ಒಂದೇ ಸಂಖ್ಯೆ ಇದೆ. ಆದರೆ ವಿಳಾಸ ಸೇರಿ ಮತ್ತಿತರ ಮಾಹಿತಿ ಗಳು ಬೇರೆಯಾಗಿವೆ. ವಿಪರ್ಯಾಸ ವೆಂದರೆ ಈ ಇಬ್ಬರೂ ಮಹಿಳೆಯರು ಸರ್ಕಾರದ ಯೋಜನೆಗಳು, ನೆರವಿನಿಂದ ವಂಚಿತರಾಗುತ್ತಿದ್ದಾರೆ.

ಇಲ್ಲಿನ ಕೋಡಿಯಾಲ ಗ್ರಾ.ಪಂ. ವ್ಯಾಪ್ತಿಯ ನಲವಾಗಲ ಗ್ರಾಮದ ಸುಜಾತಾ ಸುರೇಶ ಕರೂರು ಹಾಗೂ ಬ್ಯಾಡಗಿಯ ಅಗಸನಹಳ್ಳಿಯ ಸುಜಾತಾ ಆನಂದಪ್ಪ ಗೌಡ್ರ ಅವರಿಗೆ ಒಂದೇ ನಂಬರಿನ ಆಧಾರ್ ವಿತರಣೆ ಯಾಗಿದೆ. ಸುಜಾತಾ ಕರೂರ ಅವರು ಆಧಾರ್ ಕಾರ್ಡ್‌ನ ಒಂದು ಭಾಗ ಕಳೆದುಕೊಂಡಿದ್ದರು. ಇದನ್ನು ಆಧಾರ್ ಕಾರ್ಡ್ ನೀಡುವ ಏಜೆನ್ಸಿಯಿಂದ ಪಡೆದಾಗ ಸುಜಾತಾ ಗೌಡ್ರ ಅವರ ವಿಳಾಸದ ಹಾಗೂ ಅದೇ ಸಂಖ್ಯೆ ನಮೂದಾಗಿರುವ ಆಧಾರ್ ದೊರೆತಿದೆ.