ಕಾಂಗ್ರೆಸ್ನಲ್ಲಿದ್ದಾಗ ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಈಗ ಬಿಜೆಪಿಗೆ ಸೇರಿ ಶಾ ಎದುರು ಕೈಕಟ್ಟಿ ನಿಲ್ಲುವ ಅವಶ್ಯಕತೆ ಇರಲಿಲ್ಲ
ಬೆಂಗಳೂರು(ಮಾ.24): ಕೃಷ್ಣಗೆ ರಾಜಕೀಯ ಅನುಭವ ಇರುವಷ್ಟು ಅಮಿತ್ ಶಾಗೆ ವಯಸ್ಸಾಗಿಲ್ಲ, ಹೀಗಿರುವಾಗ ಸ್ವಾಭಿಮಾನ ಮರೆತು ಅಮಿತ್ ಶಾ ಎದುರು ಕೈ ಕಟ್ಟಿ ನಿಲ್ಲುವ ಸ್ಥಿತಿ ಬರಬಾರದಿತ್ತು ಅಂತಾ ಖರ್ಗೆ ಕುಟುಕಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಎಸ್ ಎಂ ಕೃಷ್ಣ ಬಿಜೆಪಿ ಸೇರಿದ್ದರು. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಇಂತಹದೊಂದು ಹೇಳಿಕೆ ನೀಡಿದ್ದರು. ಕಾಂಗ್ರೆಸ್ನಲ್ಲಿದ್ದಾಗ ಎಲ್ಲಾ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಈಗ ಬಿಜೆಪಿಗೆ ಸೇರಿ ಶಾ ಎದುರು ಕೈಕಟ್ಟಿ ನಿಲ್ಲುವ ಅವಶ್ಯಕತೆ ಇರಲಿಲ್ಲ ಅಂತಾ ಹೇಳಿದ್ದರು. ಖರ್ಗೆ ಹೇಳಿಕೆಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಖರ್ಗೆ ರಾಜಕೀಯಕ್ಕೆ ಬಂದಿದ್ದು ಯಾವಾಗ? ರಾಹುಲ್ ಗಾಂಧಿ ವಯಸ್ಸು ಎಷ್ಟು? ಈಗ ಖರ್ಗೆ ರಾಹುಲ್ ಮುಂದೆ ಕೈ ಕಟ್ಟಿ ನಿಲ್ಲುತ್ತಿಲ್ಲವೇ ಅಂತಾ ಸುರೇಶ್ ಕುಮಾರ್ ಖರ್ಗೆಗೆ ಟ್ವೀಟರ್ ಮೂಲಕ ಟಾಂಗ್ ಕೊಟ್ಟಿದ್ದಾರೆ..
