Asianet Suvarna News Asianet Suvarna News

21 ಕೋಟಿಗೆ ಸೇಲ್ ಆಯ್ತು ಈ ಮೀನು!: ಇದರ ವಿಶೇಷತೆ ಏನು ಗೊತ್ತಾ?

ಮೀನೊಂದು ಬರೋಬ್ಬರಿ 21 ಕೋಟಿ 50 ಸಾವಿರ ರೂಪಾಯಿಗೆ ಮಾರಾಟವಾಗಿದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಯಾಕೆ? ವಿಶೇಷತೆ ಏನು? ಅಂತೀರಾ... ಇಲ್ಲಿದೆ ವಿವರ

Tuna sells for record 3 dollar million in auction at Tokyo s new fish market Tsukiji
Author
Tokyo, First Published Jan 5, 2019, 4:06 PM IST

ಟೋಕಿಯೋ[ಜ.05]: ಜಪಾನ್ ನಲ್ಲಿ 'ಸುಶಿ' ಉದ್ಯಮಿಯೊಬ್ಬರು ಹರಾಜಿನಲ್ಲಿ ದೈತ್ಯ ಮೀನೊಂದನ್ನು ಬರೋಬ್ಬರಿ 31 ಲಕ್ಷ ಡಾಲರ್[21 ಕೋಟಿ 50 ಸಾವಿರ ರೂಪಾಯಿ] ನೀಡಿ ಖರೀದಿಸಿದ್ದಾರೆ. ಬಿಸಿಸಿ ಪ್ರಸಾರ ಮಾಡಿರುವ ವರದಿಯನ್ವಯ ಮತ್ಸ್ಯಗಳ ರಾಜ ಎಂದೇ ಕರೆಯಲ್ಪಡುವ ಕಿಂಗ್ ಕಿಯಾಶಿ ಕಿಮುರಾ ಎಂಬವರು 278 ಕೆ. ಜಿ ತೂಕದ ಈ ದೈತ್ಯ ಮೀನನ್ನು ಖರೀದಿಸಿದ್ದಾರೆನ್ನಲಾಗಿದೆ. ಇದೊಂದು ಅಳಿವಿನಂಚಿನಲ್ಲಿರುವ ಮೀನಾಗಿದೆ ಹೀಗಾಗಿ ಇದನ್ನು ಖರೀದಿಸಲು ಭಾರೀ ಪೈಪೋಟಿ ನಡೆದಿತ್ತು.

ಸಗಟು ಹಾಗೂ ಸುಶಿ[ಜಪಾನಿನ ಒಂದು ಬಗೆಯ ತಿನಿಸು] ಕಂಪೆನಿಯ ಮಾಲೀಕರು ಸಾಮಾನ್ಯವಾಗಿ ಅತ್ಯುತ್ತಮ ಮೀನುಗಳಿಗೆ ಉತ್ತಮ ಬೆಲೆ ನೀಡಿ ಖರೀದಿಸುತ್ತಾರೆ. ಅಳಿವಿನಂಚಿನಲ್ಲಿರುವ ಈ ದೈತ್ಯ ಮೀನನ್ನು Tsukiji ಎಂಬ ವಿಶ್ವದ ಅತಿ ದೊಡ್ಡ ಮೀನು ಮಾರುಕಟ್ಟೆಯಿಂದ ಖರೀದಿಸಲಾಗಿದೆ. ಈ ಮಾರುಕಟ್ಟೆ ರೆಸ್ಟೋರೆಂಟ್ ಹಾಗೂ ಇತರ ಅಂಗಡಿಗಳಿಗೂ ವಿಶ್ವದಾದ್ಯಂತ ಫೇಮಸ್ ಆಗಿದೆ.

Tsukiji ಮಾರುಕಟ್ಟೆ 1935ರಲ್ಲಿ ಆರಂಭವಾಗಿತ್ತು. ಈ ಮಾರುಕಟ್ಟೆ ದೈತ್ಯ ಮೀನುಗಳ ಹರಾಜಿಗೆ ಫೇಮಸ್ ಆಗಿದೆ. ಇಲ್ಲಿಂದ ಖರೀದಿಸಿದ ಮೀನುಗಳು ಅತಿ ಚಿಕ್ಕ ಮೀನಿನ ಶಾಪ್ ನಿಂದ ಅತಿ ದೊಡ್ಡ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತದೆ.

Follow Us:
Download App:
  • android
  • ios