ನಮ್ಮ ಪರಂಪರೆಯಲ್ಲಿ ತುಳಸಿಗೆ ಬಹಳ ಮಹತ್ವವಿದೆ. ತುಳಸಿಯನ್ನು ಪೂಜಿಸುತ್ತೇವೆ. ಇದರ ಎಲೆಗಳಲ್ಲಿ ರೋಗ ನಿರೋಧಕ ಶಕ್ತಿಯಿರುವುದರಿಂದ ತುಳಸಿಯನ್ನು ಔಷಧವಾಗಿ ಬಳಸಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಆರೋಗ್ಯವನ್ನು ವೃದ್ಧಿಸುವ ಚೈತನ್ಯವನ್ನು ತುಂಬುವ ಸಾಮರ್ಥ್ಯ ಇದರಲ್ಲಿದೆ. ಚೆನ್ನಾಗಿ ತೊಳೆದ ತುಳಸಿ ಎಲೆಗಳನ್ನು ಜಜ್ಜಿ ಅದಕ್ಕೆ ದೊಡ್ಡ ಚಮಚ ಜೇನು ಬೆರೆಸಿ ಚೆನ್ನಾಗಿ ಕಲಕಿ. ಈ ನೀರನ್ನು ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬೇಕು. ಬಳಿಕ ಮುಕ್ಕಾಲು ಗಂಟೆಯವರೆಗೂ ಏನನ್ನೂ ಸೇವಿಸಬಾರದು. ನಂತರ ಉಪಾಹಾರ ಸೇವಿಸಿ ದೈನಂದಿನ ಕೆಲಸ ಆರಂಭಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಇಡೀ ದಿನ ಲವಲವಿಕೆಯಿಂದಿರಿಸುತ್ತದೆ. ಇದನ್ನು ದಿನನಿತ್ಯ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಕಾಡುವ ಶೀತವನ್ನು ಕಡಿಮೆ ಮಾಡುತ್ತದೆ. ತುಳಸಿ ಎಲೆ ಮತ್ತು ಜೇನಿನ ಮಿಶ್ರಣ ಕೆಮ್ಮಿಗೆ ಅತ್ಯುತ್ತಮ ಔಷಧಿಯಾಗಿದ್ದು ಸತತವಾಗಿ ಕಾಡುವ ಶ್ವಾಸ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತದೆ.