ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಲೈಂಗಿಕ ಚೇಷ್ಟೆಗಳ ಕುರಿತು ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಮೊದಲ ಬಾರಿ ಆರೋಪ ಮಾಡಿದ್ದ ಸ್ಟಾರ್ಮಿ ಡೇನಿಯಲ್ಸ್‌ ಎಂಬ ನೀಲಿಚಿತ್ರ ತಾರೆ ಇದೀಗ ಇನ್ನೊಂದು ಆಘಾತಕಾರಿ ಸಂಗತಿ ಬಿಚ್ಚಿಟ್ಟಿದ್ದಾಳೆ.

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಲೈಂಗಿಕ ಚೇಷ್ಟೆಗಳ ಕುರಿತು ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ವೇಳೆ ಮೊದಲ ಬಾರಿ ಆರೋಪ ಮಾಡಿದ್ದ ಸ್ಟಾರ್ಮಿ ಡೇನಿಯಲ್ಸ್‌ ಎಂಬ ನೀಲಿಚಿತ್ರ ತಾರೆ ಇದೀಗ ಇನ್ನೊಂದು ಆಘಾತಕಾರಿ ಸಂಗತಿ ಬಿಚ್ಚಿಟ್ಟಿದ್ದಾಳೆ.

‘2006ರಲ್ಲಿ ಟ್ರಂಪ್‌ ನನ್ನನ್ನು ಭೇಟಿ ಮಾಡಿದ್ದರು. ಆಗ ನಿನ್ನನ್ನು ನೋಡಿದರೆ ನನ್ನ ಮಗಳ ನೆನಪಾಗುತ್ತದೆ ಎಂದು ಹೇಳಿ ನನ್ನೊಂದಿಗೆ ಸೆಕ್ಸ್‌ ಮಾಡಿದ್ದರು’ ಎಂದು ಟೀವಿ ಚಾನಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಡೇನಿಯಲ್ಸ್‌ ಹೇಳಿದ್ದಾಳೆ.

ಟ್ರಂಪ್‌ ನನ್ನೊಂದಿಗೆ ಸೆಕ್ಸ್‌ ಮಾಡಿದ್ದು ಒಂದೇ ಬಾರಿ. ನಾನೇನೂ ಸಂತ್ರಸ್ತೆಯಲ್ಲ. ಆದರೆ, ನಿಜ ಏನೆಂಬುದು ಹೊರಬರಬೇಕು. ಚುನಾವಣೆಗೆ 11 ದಿನ ಇರುವಾಗ ಟ್ರಂಪ್‌ ಕಡೆಯವರು ನನಗೆ 1.3 ಲಕ್ಷ ಡಾಲರ್‌ (ಸುಮಾರು 85 ಲಕ್ಷ ರು.) ಹಣ ನೀಡಿ ನನ್ನ ಹಾಗೂ ಟ್ರಂಪ್‌ ನಡುವಿನ ಸಂಬಂಧವನ್ನು ಹೊರಗೆಲ್ಲೂ ಹೇಳದಂತೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದರು.

ಅದಕ್ಕೂ ಮುನ್ನ ನಾನು ಒಪ್ಪದೇ ಇದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಆಗಿನ ಒಪ್ಪಂದವನ್ನು ನಾನೀಗ ಕೊನೆಗೊಳಿಸಲು ಬಯಸುತ್ತೇನೆ ಎಂದೂ ಡೇನಿಯಲ್ಸ್‌ ತಿಳಿಸಿದ್ದಾಳೆ.