ನಗದು ವಹಿವಾಟು ಮಿತಿಯನ್ನು ಬಜೆಟ್‌ನಲ್ಲಿ .3 ಲಕ್ಷ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಈಗ ಅದನ್ನು .2 ಲಕ್ಷಕ್ಕಿಳಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ವಿತ್ತೀಯ ಮಸೂದೆಯಲ್ಲಿ ಈ ಅಂಶವಿದೆ.

ನವದೆಹಲಿ(ಮಾ.22): ನಗದು ವಹಿವಾಟು ಮಿತಿಯನ್ನು ಬಜೆಟ್‌ನಲ್ಲಿ .3 ಲಕ್ಷ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಈಗ ಅದನ್ನು .2 ಲಕ್ಷಕ್ಕಿಳಿಸಿದೆ. ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾದ ವಿತ್ತೀಯ ಮಸೂದೆಯಲ್ಲಿ ಈ ಅಂಶವಿದೆ.

ವಿತ್ತೀಯ ಮಸೂದೆಯಲ್ಲಿ 40 ತಿದ್ದುಪಡಿ ಗಳನ್ನು ಮಂಡಿಸಲಾಗಿದ್ದು, ಇವುಗಳಿಗೆ ವಿಪಕ್ಷಗಳಾದ ಟಿಎಂಸಿ, ಬಿಜೆಡಿ ಹಾಗೂ ಆರ್‌ಎಸ್‌ಪಿ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಆದರೆ ಈ ವಿರೋಧವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ತಳ್ಳಿಹಾಕಿದರು.
ಬಜೆಟ್‌ನಲ್ಲಿ 3 ಲಕ್ಷ ರು.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸುವಂತಿಲ್ಲ ಎಂದು ಪ್ರಕಟಿಸಲಾಗಿತ್ತು. ಒಂದು ವೇಳೆ ಹೆಚ್ಚಿನ ವಹಿವಾಟು ನಡೆಸಿದ್ದು ಕಂಡುಬಂದರೆ ದಂಡ ಹಾಕುವುದಾಗಿ ಸರ್ಕಾರ ಹೇಳಿತ್ತು. ಈ ಮಸೂದೆ ಅನ್ವಯ ಯಾವುದೇ ವ್ಯಕ್ತಿ 2 ಲಕ್ಷ ರು.ಗಿಂತ ಹೆಚ್ಚಿನ ನಗದು ವಹಿವಾಟು ನಡೆಸಿದರೆ ಅಷ್ಟೇ ಪ್ರಮಾಣದ ಮೊತ್ತವನ್ನು ದಂಡವಾಗಿ ವಿಧಿಸಲಾಗುವುದು.
ನವದೆಹಲಿ: ಆದಾಯ ತೆರಿಗೆ ರಿಟನ್ಸ್‌ರ್‍ ಮಾಹಿತಿ ಸಲ್ಲಿಸುವಾಗ ‘ಆಧಾರ್‌ ಸಂಖ್ಯೆ' ಕಡ್ಡಾಯ ಮಾಡಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ, ‘ಪಾನ್‌ ಸಂಖ್ಯೆ' ಪಡೆಯಲು ಕೂಡ ಆಧಾರ್‌ ಕಡ್ಡಾಯವಾಗಲಿದೆ.

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಿರುವ ವಿತ್ತೀಯ ಮಸೂದೆ ಯಲ್ಲಿ ಈ ಪ್ರಸ್ತಾಪಗಳನ್ನು ಇಡಲಾಗಿದೆ. ಮಸೂದೆ ಅಂಗೀಕಾರವಾದ ಬಳಿಕ ಜುಲೈ 1ರಿಂದ ಈ ನಿಯಮಗಳು ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದಾಗಿ ಪಾನ್‌ ಕಾರ್ಡ್‌ ಗೆ ಆಧಾರ್‌ ಸಂಯೋಜಿಸದೇ ಹೋದರೆ, ಅದು ಜು.1 ರಿಂದ ಅಮಾನ್ಯ ಎನ್ನಿಸಿಕೊಳ್ಳಲಿದೆ. ವೇತನ ಸೇರಿದಂತೆ ಅನೇಕ ವಿತ್ತೀಯ ವಹಿವಾ ಟಿಗೆ ಪಾನ್‌ ಸಂಖ್ಯೆ ಕಡ್ಡಾಯವಾಗಿದೆ.

ವರದಿ: ಕನ್ನಡ ಪ್ರಭ