ಶಹಬಾದ್, ಕಲಬುರಗಿ (ಅ.05): ಮುಂಬೈಯಿಂದ ನಾಗರಕೋಯಿಲ್’ಗೆ ಹೊರಟ್ಟಿದ್ದ ರೈಲಿನಲ್ಲಿ ಕಲಬುರಗಿ ಜಿಲ್ಲೆಯ ಶಹಬಾದ್ ಬಳಿ ಕಳೆದ ರಾತ್ರಿ ದರೋಡೆ ನಡೆದಿರುವ ಘಟನೆ ನಡೆದಿದೆ.
ಎಂಟು ಜನ ದರೋಡೆಕೋರರ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ದರೋಡೆಕೋರರು ಪ್ರಯಾಣಿಕರಿಗೆ ಬೆದರಿಸಿ ಹಣ, ಚಿನ್ನಾಭರಣ ದರೋಡೆ ಮಾಡಿದ್ದಾರೆ.
ಆ ವೇಳೆ ದರೋಡೆಕೋರರು ಓರ್ವ ಮಹಿಳೆಯನ್ನು ರೈಲಿನಿಂದ ತಳ್ಳಿದ್ದಾರೆ. ಮಹಿಳೆಗೆ ತೀವ್ರ ಗಾಯಗಳಾಗಿದ್ದು ಶಹಬಾದ ಆಸ್ಪತ್ರೆಗಯಲ್ಲಿ ದಾಖಲಿಸಲಾಗಿದೆ.
ಪ್ರಯಾಣಿಕರು ಓರ್ವ ದರೋಡೆಕೋರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)
