ಭಾರತದಲ್ಲಿ ಇಬ್ಬರು ಪ್ರಧಾನಮಂತ್ರಿಗಳು ತೀವ್ರಗಾಮಿಗಳಿಂದ ದುರಂತ ಅಂತ್ಯ ಕಂಡಿದ್ದಾರೆ ವೈಚಾರಿಕ ಕಾರಣಗಳಿಂದ ದೇಶದಲ್ಲಿ ಹತ್ಯೆಗಳು ನಡೆಯುತ್ತಿವೆ  

ಮಹಾತ್ಮ ಗಾಂಧಿ: 1948 ಸ್ವತಂತ್ರ ಭಾರತದಲ್ಲಿ ಹಂತಕರಿಗೆ ಬಲಿಯಾದ ಮೊದಲ ಪ್ರಮುಖ ರಾಜಕೀಯ ನಾಯಕನೆಂದರೆ ರಾಷ್ಟ್ರಪಿತ ಮಹಾತ್ಮ ಗಾಂಧಿ. 1948ರ ಜನವರಿ 30ರಂದು ನವದೆಹಲಿಯಲ್ಲಿ ನಾತೂರಾಮ್ ಗೂಡ್ಸೆಯ ಗುಂಡೇಟಿಗೆ ಬಲಿಯಾದರು. ಗೂಡ್ಸೆ ರಾಷ್ಟ್ರೀಯತಾವಾದಿಯಾಗಿದ್ದು, ಭಾರತ-ಪಾಕಿಸ್ತಾನ ಇಬ್ಭಾಗವಾಗಲು ಗಾಂಧಿಯೇ ಪ್ರಮುಖ ಕಾರಣ ಎಂಬ ನಂಬಿಕೆಯಿಂದ ಅವರನ್ನು ಹತ್ಯೆ ಮಾಡಿದ ಎನ್ನಲಾಗಿದೆ. ಈ ಘಟನೆ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ನಾಯಕನ ಹತ್ಯೆಯೆಂದು ದಾಖಲಾಗಿದೆ.

ರಾಜೀವ್ ಗಾಂಧಿ: 1991 ಶ್ರೀಲಂಕಾದ ಕುಖ್ಯಾತ ಭಯೋತ್ಪಾದಕ ಸಂಘಟನೆ ಎಲ್‌ಟಿಟಿಇ ವಿರುದಟಛಿ ಅಲ್ಲಿನ ಸರ್ಕಾರವು ಕಾರ್ಯಾಚರಣೆ ನಡೆಸಲು ಸಹಕಾರ ನೀಡುವುದಕ್ಕಾಗಿ ಭಾರತ ಸರ್ಕಾರವು ಸೇನೆ ಕಳುಹಿಸಿತ್ತು. ಆ ಹಿನ್ನೆಲೆಯಲ್ಲಿ ಎಲ್ ಟಿಟಿಇ ಉಗ್ರರು ರಾಜೀವ್ ಗಾಂಧಿ ಅವರನ್ನು ಹತ್ಯೆಗೈಯಲು ಯೋಜನೆ ರೂಪಿಸಿ, ಧನು ಎಂಬ ಆತ್ಮಹತ್ಯಾ ಬಾಂಬರ್‌'ಗಳನ್ನು ಬಳಸಿಕೊಂಡು 1991ರಲ್ಲಿ ದಾಳಿ ಮಾಡಿ ಅವರನ್ನು ಹತ್ಯೆ ಮಾಡಿದರು.

ಇಂದಿರಾ ಗಾಂಧಿ : 1984 ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು 1984ರ ಅ.31ರಂದು ಅವರ ಇಬ್ಬರು ಸಿಖ್ ಹಿಂಬಾಲಕ ಸಿಬ್ಬಂದಿಯಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ದೆಹಲಿಯ ಸಫ್ದರ್‌ಜುಂಗ್ ನಿವಾಸದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕೆಲವೇ ತಿಂಗಳ ಹಿಂದೆ ಪಂಜಾಬಿನ ಅಮೃತ್‌ಸರದ ಸಿಖ್ ಪ್ರಾರ್ಥನಾ ಮಂದಿರದಲ್ಲಿ ಆಗಿದ್ದ ಖಲಿಸ್ತಾನ ಪ್ರತ್ಯೇಕತಾವಾದಿ ಸಿಖ್ ಉಗ್ರರ ವಿರುದ್ಧ ಇಂದಿರಾ ಗಾಂಧಿ ಆಪರೇಷನ್ ಬ್ಲೂಸ್ಟಾರ್ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಅದು ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ದ್ವೇಷದ ಪ್ರತೀಕಾರವಾಗಿ ಸಿಖ್ ಹಿಂಬಾಲಕರೇ ಅವರನ್ನು ಹತ್ಯೆ ಮಾಡಿದ್ದರು. ಹತ್ಯೆಯಾದ ತಕ್ಷಣ ಬಿಯಾಂತ್ ಸಿಂಗ್ ಸೈನಿಕರ ಗುಂಡೇಟಿಗೆ ಬಲಿಯಾದರೆ, ಸತ್ವಂತ್ ಸಿಂಗ್‌ನನ್ನು 1989ರಲ್ಲಿ ಗಲ್ಲಿಗೇರಿಸಲಾಯಿತು.

ಪ್ರಮೋದ್ ಮಹಾಜನ್ : 2006 ಪ್ರಮೋದ್ ಮಹಾಜನ್ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾಗಿದ್ದರು. ಮಹಾರಾಷ್ಟ್ರ ಬಿಜೆಪಿಯ ನಾಯಕರಾಗಿದ್ದ ಇವರು, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದರು.

ಲೋಕಸಭಾ ಚುನಾವಣೆಯಲ್ಲೂ ಜಯ ಸಾಧಿಸಿ, ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. 2006ರ ಏ.22ರಂದು ಕೌಟುಂಬಿಕ ಕಾರಣಗಳ ಹಿನ್ನೆಲೆಯಲ್ಲಿ ಅವರ ಸ್ವಂತ ಸಹೋದರ ಪ್ರವೀಣ್ ಮಹಾಜನ್ ಎಂಬಾತನೇ ಗುಂಡು ಹಾರಿಸಿ ಪ್ರಮೋದ್‌ರ ಮನೆಯಲ್ಲಿ ಅವರನ್ನು ಹತ್ಯೆ ಮಾಡಿದ್ದ.

ಹತ್ಯೆಗೀಡಾದ ಭಾರತದ ಇನ್ನಿತರ ಪ್ರಮುಖ ನಾಯಕರು

ಲಲಿತ್ ಮಾಕನ್: ಕಾಂಗ್ರೆಸ್ ಮುಖಂಡ 1984ರಲ್ಲಿ ಹತ್ಯೆ 

ಅಬ್ದುಲ್ ಘನಿ ಲೋನ್: ಕಾಶ್ಮೀರಿ ಪ್ರತ್ಯೇಕತಾವಾದಿ, 2002 ಮೇ 21ರಂದು ಹತ್ಯೆಗೀಡಾದರು

ಬಿಯಾಂತ್ ಸಿಂಗ್: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, 1995ರ ಫೆ.19ರಂದು ಹತ್ಯೆ

ನರೇಂದ್ರ ದಾಬೋಲ್ಕರ್: ಮಹಾರಾಷ್ಟ್ರದ ವಿಚಾರವಾದಿ, ಅ.20,2013ರಂದು ಹತ್ಯೆ

ಗೋವಿಂದ ಪಾನ್ಸರೆ: ಮಹಾರಾಷ್ಟ್ರದ ವಿಚಾರವಾದಿ, ಫೆ.20, 2015ರಂದು ಹತ್ಯೆ

ಎಂ.ಎಂ.ಕಲಬುರಗಿ: ವಿಚಾರವಾದಿ, ಪ್ರಗತಿಪರ ಚಿಂತಕ, ಆ.30, 2015ರಂದು ಹತ್ಯೆ

ಗೌರಿ ಲಂಕೇಶ್: ಪತ್ರಕರ್ತೆ - ಚಿಂತಕಿ, ಸೆ.5, 2017ರಂದು ಹತ್ಯೆ