Asianet Suvarna News Asianet Suvarna News

ಸಾರಿಗೆ ನೌಕರರ ಮುಷ್ಕರ ಅಂತ್ಯ, ಚಿನ್ನದ ದರ ಕುಸಿತ: ಇಲ್ಲಿವೆ ಡಿ. 14ರ ಟಾಪ್ 10 ಸುದ್ದಿಗಳು!

ಕಳೆದ ನಾಲ್ಕು ದಿನಗಳಿಂದ ಪ್ರಯಾಣಿಕರ ನಿದ್ದೆಗೆಡಿಸಿದ್ದ ಸಾರಿಗೆ ನೌಕರರ ಬಂದ್ ಕೊನೆಯೂ ಅಂತ್ಯಗೊಂಡಿದೆ. ಸರ್ಕಾರ ನೌಕರರ ಬಹುತೇಕ ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡಿದೆ. ಇತ್ತ ಮತ್ತೊಂದೆಡೆ ಜೆಡಿಎಸ್‌ ನಾಯಕ ಮಾಜಿ ಮುಖ್ಯಮಂತ್ರಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಅತತ್ತ ಚಿನ್ನದ ದರ ಕುಸಿತಗೊಂಡಿದ್ದು, ಖರೀದಿದಾರರನ್ನು ಕೊಂಚ ನಿರಾಳಗೊಳಖಿಸಿದೆ. ಇಷ್ಟೇ ಅಲ್ಲದೇ ಇಂದು ಡಿಸೆಂಬರ್ 14 ರಂದು ಸದ್ದು ಮಾಡಿದ ಟಾಪ್ ಹತ್ತು ಸುದ್ದಿಗಳು ಇಲ್ಲಿವೆ ನೋಡಿ

Top 10 News Of 14th December 2020 in Kannada
Author
Bangalore, First Published Dec 14, 2020, 5:44 PM IST

ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಭರವಸೆಗಳೇನು? ಇಲ್ಲಿದೆ ಡಿಟೇಲ್ಸ್

Top 10 News Of 14th December 2020 in Kannada

ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಇನ್ನೂ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರ ಮುಷ್ಕರ ಇಂದು (ಸೋಮವಾರ) ಕೂಡ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿರುವುದರಿಂದ ಯಾವುದೇ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿಲ್ಲ. ಇದರಿಂದ ಪ್ರಯಾಣಿಕರು ಸಾಕಷ್ಟು ಪರದಾಡುತ್ತಿದ್ದಾರೆ.

ದೇವೇಗೌಡ್ರ ಭೇಟಿ ಬಳಿಕ ಸ್ಪೋಟಕ ಹೇಳಿಕೆ ಕೊಟ್ಟ ಕಾಂಗ್ರೆಸ್ ಹಿರಿಯ ನಾಯಕ..!

Top 10 News Of 14th December 2020 in Kannada

ಕಾಂಗ್ರೆಸ್‌ ಕಾರ್ಯಚಟುವಟಿಕೆಗಳಿಂದ ಅಂತರ ಆಯ್ದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಇಂದು (ಸೋಮವಾರ) ಜೆಡಿಎಸ್​ ವರಿಷ್ಠ ಹೆಚ್.​​ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮಹತ್ವದ ಘೋಷಣೆ...!

Top 10 News Of 14th December 2020 in Kannada

 

ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಜನ್ಮದಿನ ಇದೇ ಡಿ.16ರಂದು ಇದ್ದು, ಅಂದು ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಕೊರೋನಾ ಸಂಕಷ್ಟವು ಜನರನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಡಿ.16ರಂದು ಜನ್ಮದಿನ ಆಚರಿಸದಿರಲು ನಿರ್ಧರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಯೋಗಿ ಮಹತ್ವಾಕಾಂಕ್ಷೆ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಮಹತ್ವದ ಬದಲಾವಣೆ!

Top 10 News Of 14th December 2020 in Kannada

ರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣ ಸಂಬಂಧ ಹಲವಾರು ಸುತ್ತಿನ ಚರ್ಚೆ, ಮಾತುಕತೆಯ ಬಳಿಕ ಇಡೀ ಕ್ಯಾಂಪಸ್ ಅನ್ನು ಹೊಸದಾಗಿ ವಿಸ್ತರಿಸಲು ಈಗ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಎಪ್ಪತ್ತು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಯೋಚಿಸಿದ್ದ ಮಂದಿರದ ಆವರಣವನ್ನು 108 ಎಕರೆ ಪ್ರದೇಶಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. 

ಇಂದಿನಿಂದ RTGS‌ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ!

Top 10 News Of 14th December 2020 in Kannada

ಹೆಚ್ಚು ಮೌಲ್ಯದ ಹಣ ವರ್ಗಾವಣೆಗೆ ಇರುವ ಆನ್‌ಲೈನ್‌ ವ್ಯವಸ್ಥೆಯಾದ ಆರ್‌ಟಿಜಿಎಸ್‌ (ರಿಯಲ್‌ ಟೈಮ್‌ ಗ್ರಾಸ್‌ ಸೆಟ್‌್ಲಮೆಂಟ್‌ ಸಿಸ್ಟಮ್‌) ಸೇವೆಯನ್ನು ದಿನದ 24 ಗಂಟೆಯೂ ಬಳಸುವ ಅವಕಾಶ ಭಾನುವಾರ ರಾತ್ರಿಯಿಂದ ಲಭ್ಯವಾಗಿದೆ. ಇದರೊಂದಿಗೆ ಈ ವ್ಯವಸ್ಥೆ ಜಾರಿ ಮಾಡಿದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರ್ಪಡೆಯಾಗಿದೆ.

ಸ್ಟಾರ್ ನಟನ ಸಂಭಾವನೆ ಮೀರಿಸುತ್ತದೆ 'ವಜ್ರಕಾಯ' ನಟಿ ನಭಾ ನಟೇಶ್‌ ಒಂದು ಚಿತ್ರದ ಸಂಭಾವನೆ?
Top 10 News Of 14th December 2020 in Kannada

ಟಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ನಂತರ ಸಿಕ್ಕಾಪಟ್ಟೆ ನೇಮ್ ಆ್ಯಂಡ್ ಫೇಮ್‌ ಮಾಡಿದ ನಟಿ ನಭಾ ನಟೇಶ್ ಒಂದು ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟೆಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ನಿಜಕ್ಕೂ ನಭಾ ಡಿಮ್ಯಾಂಡ್‌  1 ಕೋಟಿ ಮುಟ್ಟಿದ್ಯಾ? 

ನಟಿ ಆರ್ಯ ನಿಗೂಢ ಸಾವಿನ ರಹಸ್ಯ ಬಯಲು ಮಾಡಿದ ಮರಣೋತ್ತರ ಪರೀಕ್ಷೆ

Top 10 News Of 14th December 2020 in Kannada

ಈಗಷ್ಟೆ ಬಣ್ಣದ ಲೋಕದಲ್ಲಿ ಹೆಸರು ಮಾಡುತ್ತಿದ್ದ ನಟಿ ಆರ್ಯ ಬ್ಯಾನರ್ಜಿ ಡಿಸೆಂಬರ್ 12ರಂದು ಕೋಲ್ಕತಾ ನಿವಾಸದಲ್ಲಿ ಅನುಮಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದರು. ನಟಿ ಆರ್ಯ ಸಾವಿನ ರಹಸ್ಯ ಬೆನ್ನಟ್ಟಿದ ಪೊಲೀಸರು ಸಾವಿಗೆ ಕಾರಣ  ಪತ್ತೆ ಹಚ್ಚುವುದರಲ್ಲಿ  ಯಶಸ್ವಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಕ್ರೈಂ ಜಂಟಿ ಅಧಿಕಾರಿ ಮುರಳೀಧರ್ ಶರ್ಮಾ ಮಾಹಿತಿ ನೀಡಿದ್ದಾರೆ.

70 ಲಕ್ಷ ಆಫರ್‌ ಕೊಟ್ರೂ ಮಾರಲೊಪ್ಪದ ಕುರಿ ಮಾಲಿಕ!

Top 10 News Of 14th December 2020 in Kannada

ದಷ್ಟಪುಷ್ಟವಾದ ಕುರಿಗೆ ಅಬ್ಬಬ್ಬಾ ಅಂದರೂ 20ರಿಂದ 25 ಸಾವಿರಕ್ಕಿಂತ ಹೆಚ್ಚಿನ ದರ ಇರದು. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮದ್ಗಾ್ಯಲ್‌ ತಳಿಯ ಒಂದು ಕುರಿಗೆ ಖರೀದಿದಾರನೊಬ್ಬ ಬರೋಬ್ಬರಿ 70 ಲಕ್ಷ ರು. ಆಫರ್‌ ನೀಡಿದ್ದಾನೆ.

ಲೈಂಗಿಕ ತೃಪ್ತಿಗಾಗಿ ಮಹಿಳಾ ಸ್ಕ್ವಾಡ್ ಇಟ್ಟುಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ!

Top 10 News Of 14th December 2020 in Kannada

ಕಿಮ್ ಜಾಂಗ್ ಉನ್ ಎಂಬ ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ಉತ್ತರ ಕೊರಿಯಾ ದೇಶದಲ್ಲಿ ಎಲ್ಲರ ಮೇಲೂ ಒಂದಲ್ಲ ಒಂದು ನಿರ್ಬಂಧ ನಿಷೇಧ ಒತ್ತಡಗಳು ಇದ್ದೇ ಇವೆ. ಯಾರೂ ಸರಕಾರದ ವಿರುದ್ಧ ಮಾತಾಡುವಂತಿಲ್ಲ. ಕಿಮ್ ಬಗ್ಗೆ ವಿರೋದದ ಒಂದಕ್ಷರ ಮಾತನಾಡಿದರೂ ಆತನ ತಲೆ ದೇಹದ ಮೇಲೆ ಉಳಿದಿರುವುದಿಲ್ಲ. ಇಂಥ ದೇಶದಲ್ಲಿ ಸ್ತ್ರೀಯರ ಮೇಲೆ ಇನ್ನಷ್ಟು ನಿರ್ಬಂಧಗಳಿವೆ. ಅವು ಯಾವುವುದ ಅಂತ ತಿಳಿಯೋಣ ಬನ್ನಿ.

ಚಿನ್ನ ಖರೀದಿದಾರರಿಗೆ ಬಂಪರ್, ದರ ಭಾರೀ ಕುಸಿತ: ಹೀಗಿದೆ ಡಿ. 14ರ ರೇಟ್!

Top 10 News Of 14th December 2020 in Kannada

ಏರಿಳಿತವಾಡುತ್ತಿದ್ದ ಚಿನ್ನದ ದರದಲ್ಲಿ ದಾಖಲೆಯ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಡಿಸೆಂಬರ್ 14ರ ಗೋಲ್ಡ್ ರೇಟ್

Follow Us:
Download App:
  • android
  • ios