Asianet Suvarna News Asianet Suvarna News

ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಭರವಸೆಗಳೇನು? ಇಲ್ಲಿದೆ ಡಿಟೇಲ್ಸ್

ಸಾರಿಗೆ ನೌಕರರ ಭರವಸೆಗಳ ಪತ್ರದಲ್ಲಿ ಮತ್ತೆ ಗೊಂದಲ ಉಂಟಾಗಿದ್ದು, ಸಾರಿಗೆ ನೌಕರರು ಆಕ್ರೋಶಗೊಂಡಿದ್ದಾರೆ. ಹಾಗಾದ್ರೆ, ಪತ್ರದಲ್ಲೇನಿದೆ ಎನ್ನುವ ಡಿಟೇಲ್ಸ್ ಇಲ್ಲಿದೆ.
 

Here Is details of Karnataka Govt gives assurance to Transportation employees rbj
Author
Bengaluru, First Published Dec 14, 2020, 3:28 PM IST

ಬೆಂಗಳೂರು, (ಡಿ.14) : ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಇನ್ನೂ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರ ಮುಷ್ಕರ ಇಂದು (ಸೋಮವಾರ) ಕೂಡ ಮುಂದುವರೆದಿದೆ.

ಳೆದ ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿರುವುದರಿಂದ ಯಾವುದೇ ಸರ್ಕಾರಿ ಬಸ್‌ಗಳು ರಸ್ತೆಗಿಳಿದಿಲ್ಲ. ಇದರಿಂದ ಪ್ರಯಾಣಿಕರು ಸಾಕಷ್ಟು ಪರದಾಡುತ್ತಿದ್ದಾರೆ.

ಸರ್ಕಾರಕ್ಕೆ ಮತ್ತಷ್ಟು ಬಿಸಿ ಮುಟ್ಟಿಸಲು ಮುಂದಾದ ಸಾರಿಗೆ ನೌಕರರು

ಲಿಖಿತ ಭರವಸೆ ಪತ್ರ
ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವಂತ ರಾಜ್ಯದ ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರ ಮಣಿದಿದೆ. ಸಾರಿಗೆ ನೌಕರರ ಭರವಸೆಗಳ ಕುರಿತ ಬಗ್ಗೆ ಲಿಖಿತ ಪತ್ರವನ್ನು ಸರ್ಕಾರದ ಪ್ರತಿನಿಧಿಯಾಗಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪ್ರತಿಭಟನಾ ನಿರತ ಸಾರಿಗೆ ನೌಕರರ ಮುಖಂಡರಿಗೆ ತಲುಪಿಸಿದರು.

 ನೌಕರರು ಇಟ್ಟಿದ್ದಂತ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದೆ. ಅಲ್ಲದೇ ಲಿಖಿತ ರೂಪದಲ್ಲಿ ಬೇಡಿಕೆ ಈಡೇರಿಕೆ ಪತ್ರ ನೀಡಿದ ನಂತರವೇ ಮುಷ್ಕರ ಕೈಬಿಡುವುದಾಗಿ ಪಟ್ಟು ಹಿಡಿದ ಕಾರಣ, ಬೇಡಿಕೆ ಪತ್ರ ಕೂಡ ನೀಡಿದೆ.

ಆದ್ರೆ, ಈ ಪತ್ರದಲ್ಲಿ 6ನೇ ವೇತನ ಆಯೋಗದ ಬಗ್ಗೆ ಗೊಂದಲ ಉಂಟಾಗಿದ್ದು, ಮತ್ತೆ ಸಾರಿಗೆ ನೌಕರರು ಹಾಗೂ ಸರ್ಕಾರದ ಮಧ್ಯೆ ಹಗ್ಗಾಜಗ್ಗಾಟ ನಡೆದಿದೆ.

ಸಾರಿಗೆ ಮುಖಂಡರ ಬೇಡಿಕೆಗೆ ಸರ್ಕಾರದ ಒಪ್ಪಿಗೆಗಳು ಹೀಗಿವೆ..
01. ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ
02. ಕೋವಿಡ್​ನಿಂದ ಮೃತಪಟ್ಟಿದ್ದರೆ ಕುಟುಂಬಕ್ಕೆ ₹30 ಲಕ್ಷ ಪರಿಹಾರ
03. ಅಂತರ್ ನಿಗಮ ವರ್ಗಾವಣೆಗೆ ಸೂಕ್ತ ನೀತಿ ರಚನೆ
04. ನೌಕರರ ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
05. ನಿಗಮದಲ್ಲಿ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ಕ್ರಮ
06. ಸಿಬ್ಬಂದಿ ಕರ್ತವ್ಯ ನಿರ್ವಹಿಸಿದಲ್ಲಿ ಬಾಟಾ ನೀಡಲಾಗುತ್ತೆ
07. ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ
08. ನಾಟ್ ಇಶ್ಯೂಡ್‌, ನಾಟ್ ಕಲೆಕ್ಟೆಡ್ ಬದಲಾಗಿ ಪರ್ಯಾಯ ವ್ಯವಸ್ಥೆ
09. 6ನೇ ವೇತನ ಆಯೋಗದ ಶಿಫಾರಸುಗಳನ್ನ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪರಿಗಣನೆ

Here Is details of Karnataka Govt gives assurance to Transportation employees rbj

Follow Us:
Download App:
  • android
  • ios