ದಷ್ಟಪುಷ್ಟವಾದ ಕುರಿಗೆ ಅಬ್ಬಬ್ಬಾ ಅಂದರೂ 20ರಿಂದ 25 ಸಾವಿರಕ್ಕಿಂತ ಹೆಚ್ಚಿನ ದರ ಇರದು| 70 ಲಕ್ಷ ಆಫರ್ ಕೊಟ್ರೂ ಮಾರಲೊಪ್ಪದ ಕುರಿ ಮಾಲಿಕ!
ಮುಂಬೈ(ಡಿ.14): ದಷ್ಟಪುಷ್ಟವಾದ ಕುರಿಗೆ ಅಬ್ಬಬ್ಬಾ ಅಂದರೂ 20ರಿಂದ 25 ಸಾವಿರಕ್ಕಿಂತ ಹೆಚ್ಚಿನ ದರ ಇರದು. ಆದರೆ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮದ್ಗಾ್ಯಲ್ ತಳಿಯ ಒಂದು ಕುರಿಗೆ ಖರೀದಿದಾರನೊಬ್ಬ ಬರೋಬ್ಬರಿ 70 ಲಕ್ಷ ರು. ಆಫರ್ ನೀಡಿದ್ದಾನೆ.
ಇಷ್ಟೊಂದು ಹಣ ನೀಡಿದರೂ ಮಾಲೀಕ ಮಾತ್ರ ಕುರಿಯನ್ನು ಮಾರಾಟ ಮಾಡಲು ನಿರಾಕರಿಸಿರುವ ಮೂಲಕ ಸುದ್ದಿಯಾಗಿದ್ದಾನೆ.
ಸುಮಾರು 200 ಕುರಿಗಳನ್ನು ಹಿಂಡನ್ನು ಹೊಂದಿರುವ ಬಾಬು ಮೆಟ್ಕಾರಿ ಎಂಬಾತನಿಗೆ ಖರೀದಿದಾರ ಈ ಆಫರ್ ಇಟ್ಟಿದ್ದ. ಆದರೆ, ಕುರಿಯನ್ನು ಮಾರಲು ನಿರಾಕರಿಸಿದ ಆತ, ಒಂದು ಕುರಿಗೆ 1.5 ಕೋಟಿ ರು. ನೀಡುವಂತೆ ಕೇಳಿದ್ದಾನೆ.
ಮದ್ಗಾ್ಯಲ್ ಕುರಿಯ ಮಾಂಸ ವಿಶೇಷವಾದ ರುಚಿಯನ್ನು ಹೊಂದಿದೆಯಂತೆ. ಹೀಗಾಗಿ ಈ ಕುರಿಯ ಮಾಂಸಕ್ಕೆ ಭಾರೀ ಬೇಡಿಕೆ ಇದೆ.
ಮಾಲೀಕ ಹೇಳಿದ್ದೇನು?
ಕುರಿ ಬಗ್ಗೆ ಮಾತನಾಡಿರುವ ಮಾಲೀಕ, “ಈ ಕುರಿ ಹೆಸರು ಸರ್ಜಾ. ಆದರೆ ಇದಕ್ಕೆ ನಂತರ ಮೋದಿ ಎಂದು ಮರು ನಾಮಕರಣ ಮಾಡಲಾಯಿತು. ಮೋದಿಯವರು ಹೇಗೆ ಎಲ್ಲಾ ಚುನಾವಣೆಗಳನ್ನು ಗೆದ್ದು ದೇಶದ ಪ್ರಧಾನಿಯಾದರೋ ಹಾಗೆ ಈ ಕುರಿಯೂ ಎಲ್ಲ ಉತ್ಸವಗಳಲ್ಲಿ ಗೆದ್ದು, ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಪಡೆದುಕೊಂಡಿದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈ ಸರ್ಜಾ ತನಗೆ ಹಾಗೂ ತನ್ನ ಕುಟುಂಬಕ್ಕೆ ಅದೃಷ್ಟ ತಂದಿದೆ ಎಂದು ಹೇಳಿಕೊಳ್ಳುವ ಮೆಟ್ಕಾರಿ ಅವರಿಗೆ ಇದನ್ನು ಮಾರಲು ಇಷ್ಟವಿಲ್ಲವಂತೆ. ಈ ಕುರಿಗೆ ಗ್ರಾಹಕರೊಬ್ಬರು 70 ಲಕ್ಷ ರೂಪಾಯಿಯ ಬೇಡಿಕೆಯಿಟ್ಟಿದ್ದಾರೆ. ಆದರೆ ಇದಕ್ಕೆ 1.5 ಕೋಟಿ ಬೆಲೆ ನಿಗದಿಪಡಿಸಿದ್ದೇನೆ ಎಂದು ಹೇಳಿದ್ದಾರೆ.
