ಹೆಚ್ಚು ಮೌಲ್ಯದ ಹಣ ವರ್ಗಾವಣೆಗೆ ಇರುವ ಆನ್‌ಲೈನ್ ವ್ಯವಸ್ಥೆಯಾದ ಆರ್‌ಟಿಜಿಎಸ್| ಇಂದಿನಿಂದ ಆರ್‌ಟಿಜಿಎಸ್ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ
ಮುಂಬೈ(ಡಿ.೧೪): ಹೆಚ್ಚು ಮೌಲ್ಯದ ಹಣ ವರ್ಗಾವಣೆಗೆ ಇರುವ ಆನ್‌ಲೈನ್ ವ್ಯವಸ್ಥೆಯಾದ ಆರ್‌ಟಿಜಿಎಸ್ (ರಿಯಲ್ ಟೈಮ್ ಗ್ರಾಸ್ ಸೆಟ್‌್ಲಮೆಂಟ್ ಸಿಸ್ಟಮ್) ಸೇವೆಯನ್ನು ದಿನದ 24 ಗಂಟೆಯೂ ಬಳಸುವ ಅವಕಾಶ ಭಾನುವಾರ ರಾತ್ರಿಯಿಂದ ಲಭ್ಯವಾಗಿದೆ. ಇದರೊಂದಿಗೆ ಈ ವ್ಯವಸ್ಥೆ ಜಾರಿ ಮಾಡಿದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರ್ಪಡೆಯಾಗಿದೆ.
ಆರ್‌ಬಿಐ ಮಹತ್ವದ ಘೋಷಣೆ: ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್!
ಭಾನುವಾರ ರಾತ್ರಿ 12.30ರಿಂದಲೇ ಈ ಸೇವೆ ದೇಶಾದ್ಯಂತ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಿದ್ದಾರೆ. ಈ ಸೇವೆ ವಾರದ ಏಳೂ ದಿನ, ವರ್ಷದ 365 ದಿನಗಳೂ ಲಭ್ಯವಿರಲಿದೆ. ನೆಫ್ಟ್‌ನಲ್ಲಿ ವಾರದ ಏಳೂ ದಿನ ಸೇವೆಗೆ ಅವಕಾಶ ಕಲ್ಪಿಸಿದ ವರ್ಷದೊಳಗೆ ಆರ್‌ಬಿಐ ಆರ್‌ಟಿಜಿಎಸ್ ವ್ಯವಸ್ಥೆಯಲ್ಲೂ ಇದೇ ರೀತಿಯ ಸೌಲಭ್ಯ ಕಲ್ಪಿಸಿದೆ.
ಹಗಲು -ರಾತ್ರಿ ವಹಿವಾಟು: NEFT ಇನ್ಮುಂದೆ ಬೊಂಬಾಟು!
2004ರಲ್ಲಿ ಕೇವಲ 4 ಬ್ಯಾಂಕ್‌ಗಳಿಗೆ ಸೀಮಿತವಾಗಿ ಆರಂಭವಾದ ಈ ಸೇವೆಯನ್ನು ಪ್ರಸಕ್ತ ದೇಶಾದ್ಯಂತ ಇರುವ 237 ಬ್ಯಾಂಕ್‌ಗಳ ಮೂಲಕ ಬಳಸಲಾಗುತ್ತಿದೆ. ನಿತ್ಯ 6.35 ಲಕ್ಷದಷ್ಟುವ್ಯವಹಾರ ಆರ್‌ಟಿಜಿಎಸ್ ಮೂಲಕ ನಡೆಯುತ್ತಿದ್ದು, 4.17 ಲಕ್ಷ ಕೋಟಿ ರು. ಹಣ ವರ್ಗಾವಣೆಯಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 14, 2020, 10:54 AM IST