ಒಟ್ಟಾರೆ ಗ್ರಹಣದ ಅವಧಿ ಸುಮಾರು 3 ತಾಸಿನದ್ದಾಗಿದೆ. ಚಂದ್ರನು ಸೂರ್ಯನ ಮೇಲೆ ಬಂದಾಗ ಸೂರ್ಯಗ್ರಹಣ ಸುಮಾರು 3 ನಿಮಿಷಗಳ ಕಾಲ ಸಂಪೂರ್ಣ ಖಗ್ರಾಸ್ ಆಗಿ ಕಾಣಲಿದೆ.
ವಾಷಿಂಗ್ಟನ್(ಆ.20): 99 ವರ್ಷ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕವು ಸೋಮವಾರ ಖಗ್ರಾಸ್ ಸೂರ್ಯಗ್ರಹಣವನ್ನು ಕಾಣಲಿದೆ.
ಅಮಾವಾಸ್ಯೆಗಳಂದು ಕಾಣುವ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಖಗ್ರಾಸ್ ಆಗಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ. 1991ರಲ್ಲಿ ಕೊನೆಯ ಬಾರಿ ಅಮೆರಿಕದಲ್ಲಿ ಖಗ್ರಾಸ ಸೂರ್ಯಗ್ರಹಣ ಗೋಚರಿಸಿತ್ತು. ಆದರೆ ಆ ಸಲ ಇಡೀ ಅಮೆರಿಕದಲ್ಲಿ ಗ್ರಹಣ ಗೋಚರಿಸದೇ ಹವಾಯಿ ದ್ವೀಪಗಳಲ್ಲಿ ಮಾತ್ರ ಕಂಡಿತ್ತು.
ಒಟ್ಟಾರೆ ಗ್ರಹಣದ ಅವಧಿ ಸುಮಾರು 3 ತಾಸಿನದ್ದಾಗಿದೆ. ಚಂದ್ರನು ಸೂರ್ಯನ ಮೇಲೆ ಬಂದಾಗ ಸೂರ್ಯಗ್ರಹಣ ಸುಮಾರು 3 ನಿಮಿಷಗಳ ಕಾಲ ಸಂಪೂರ್ಣ ಖಗ್ರಾಸ್ ಆಗಿ ಕಾಣಲಿದೆ.
ಭಾರತದಲ್ಲಿಕಾಣಿಸದು
ಅಮೆರಿಕದಾದ್ಯಂತ ಕಾಣಿಸುವ ಈ ಗ್ರಹಣ ಭಾರತ ಹಾಗೂ ವಿಶ್ವದ ಇತರ ಅನೇಕ ಭಾಗಗಳಲ್ಲಿ ಕಾಣಿಸದು. ಹೀಗಾಗಿ ಭಾರತದಲ್ಲಿ ಯಾವುದೇ ಗ್ರಹಣಾಚರಣೆ ಇರುವುದಿಲ್ಲ. ಕಳೆದ ಆಗಸ್ಟ್ 7 ರಂದು ಭಾರತದಲ್ಲಿ ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಿತ್ತು. ಇನ್ನು ಜನವರಿ 31ರಂದು ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ.
