ದುನಿಯಾ ವಿಜಯ್'ಗಿಂದು 44ನೇ ಹುಟ್ಟುಹಬ್ಬದ ಸಂಭ್ರಮ

First Published 20, Jan 2018, 9:07 AM IST
Today Duniya Vijay 44th Birthday
Highlights

ಅಭಿಮಾನಿಗಳ ಜೊತೆ ತಡರಾತ್ರಿ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಗಿರಿನಗರದ ನಿವಾಸದಲ್ಲಿ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮದಿಂದ ಹುಟ್ಟುಹಬ್ಬವನ್ನು ಬರ ಮಾಡಿಕೊಂಡರು.

ಬೆಂಗಳೂರು(ಜ.20): ಸ್ಯಾಂಡಲ್'ವುಡ್ ಕರಿಚಿರತೆ ದುನಿಯಾ ವಿಜಯ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಅಭಿಮಾನಿಗಳ ಜೊತೆ ತಡರಾತ್ರಿ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಗಿರಿನಗರದ ನಿವಾಸದಲ್ಲಿ ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮದಿಂದ ಹುಟ್ಟುಹಬ್ಬವನ್ನು ಬರ ಮಾಡಿಕೊಂಡರು.

ಇದೇ ವೇಳೆ ಕನಕ ಚಿತ್ರದ ಹಾಡು ಹಾಡಿ ಅಭಿಮಾನಿಗಳನ್ನು ರಂಜಿಸಿದರು. ಯೋಗರಾಜ್ ಭಟ್ ನಿರ್ದೇಶನದ ರಂಗ SSLC ಮೂಲಕ ಚಂದನವನಕ್ಕೆ ಕಾಲಿಟ್ಟ ವಿಜಿ, ದುನಿಯಾ ಸಿನಿಮಾದ ಮೂಲಕ ನಾಯಕ ನಟನಾಗಿ ಖ್ಯಾತಿ ಗಳಿಸಿದರು. ಆ ಬಳಿಕ ಯುಗ, ಚಂಡ, ಗೆಳೆಯ ಚಿತ್ರಗಳಲ್ಲಿ ಅಭಿನಯಿಸಿದ ವಿಜಿ, ಜಂಗ್ಲಿ, ಜರಾಸಂದ, ಜಾನಿ ಮೇರಾ ನಾಮ್ , ಭೀಮಾ ತೀರಾದಲ್ಲಿ ಚಿತ್ರಗಳಲ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದರು.

ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕನಕ' ಸದ್ಯದಲ್ಲಿಯೇ ತೆರೆಕಾಣಲಿದೆ

ಈ ಬಗ್ಗೆ ಸುವರ್ಣನ್ಯೂಸ್ ಜತೆ ಮಾತನಾಡಿದ ವಿಜಿ, ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ತುಂಬ ಖುಷಿ ಆಗ್ತಾಯಿದೆ ಎಂದು ಹೇಳಿದರು.

loader