ಲೋಕಸಭೆಗೆ ಹೊಸ ಸದಸ್ಯರ ಆಯ್ಕೆ ಆಗಿದೆ. ಇದೇ ಮೊದಲ ಸಾರಿ ಶೇ.14ಕ್ಕಿಂತ ಹೆಚ್ಚು ಮಹಿಳೆಯರು ಲೋಕಸಭೆಗೆ ಆಯ್ಕಕೆಯಾಗಿದ್ದಾರೆ. ಟಿಎಂಸಿಯಿಂದ ಇಬ್ಬರು ನಟಿ  ಮಣಿಗಳು ಆಯ್ಕೆಯಾಗಿದ್ದಾರೆ.

ಬೆಂಗಳೂರು[ಮೇ.26]: ಈ ಬಾರಿಯ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅತಿಹೆಚ್ಚು ಸಂಖ್ಯೆಯ ಮಹಿಳಾ ಅಭ್ಯರ್ಥಿಗಳು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ದೇಶದ 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಲೋಕಸಭೆ ಪ್ರವೇಶ ಮಾಡಿದ್ದಾರೆ. 

ಸುಮಲತಾ ಗೆಲುವಿಗೆ ಇಲ್ಲಿವೆ 10 ಕಾರಣಗಳು!

ಬೆಂಗಾಲಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟಿಯರಾದ ಸುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿ ಪಶ್ಚಿಮ ಬಂಗಾಳದ ಬಸಿರ್ ಹತ್ ಮತ್ತು ಜಾಧವಪುರ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ. ಟಿಎಂಸಿ ಈ ನಟಿಯರಿಗೆ ಟಿಕೆಟ್ ನೀಡಿದಾಗ ಟ್ರೋಲ್ ಗೂ ಗುರಿಯಾಗಿದ್ದರು.

ತೃಣಮೂಲ ಕಾಂಗ್ರೆಸ್ 17 ಜನ ಮಹಿಳೆಯರಿಗೆ ಲೋಕಸಭಾ ಟಿಕೆಟ್ ನೀಡಿತ್ತು. ಸುಸ್ರತ್ 3,50,369 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರೆ, ,ಮಿಮಿ 2,95,239 ಮತಗಳ ಅಂತರದ ಜಯ ದಾಖಲಿಸಿ ದಾಖಲೆ ಬರೆದಿದ್ದಾರೆ.

View post on Instagram
View post on Instagram