Asianet Suvarna News Asianet Suvarna News

ಇತ್ತೀಚೆಗಷ್ಟೆ ಮದುವೆಯಾದ ನಟಿ, ಸಂಸದೆ ನುಸ್ರತ್ ಜಹಾನ್ ಐಸಿಯುನಲ್ಲಿ

ಟಿಎಂಸಿ ಸಂಸದೆಗೆ ಕಾಣಿಸಿಕೊಂಡ ಉಸಿರಾಟ ತೊಂದರೆ/ ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು/ ನಟಿ-ಸಂಸದೆಗೆ ಕಾಣಿಸಿಕೊಂಡ ಉಸಿರಾಟದ ತೊಂದರೆ/ ಟಿಎಂಸಿಯಿಂದ ಗೆದ್ದು ಸಂಸತ್ ಪ್ರವೇಶ  ಮಾಡಿದ್ದ ಕಿರಿಯ ಸಂಸದೆ

TMC MP Actress Nusrat Jahan in Kolkata Hospital due to Respiratory Problem
Author
Bengaluru, First Published Nov 18, 2019, 5:54 PM IST

ಕೋಲ್ಕತ್ತಾ [ನ. 18]  ಸಂಸತ್ ನಲ್ಲಿಯೇ ಸಂಚಲನ ಮೂಡಿಸಿದ್ದ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಉಸಿರಾಟದ ತೊಂದಯಿಂದ ಕೋಲ್ಕತ್ತಾ ನಗರದ ಖಾಸಗಿ ಆಸ್ಪತ್ರೆಗೆ  ದಾಖಲಾಗಿದ್ದಾರೆ. 

ಟಿಎಂಸಿ ಪಕ್ಷದಿಂದ ಬಸಿರ್‌ಹತ್‌ನಿಂದ ಲೋಕಸಭೆಗೆ ಆಯ್ಕೆಯಾದ ಜಹಾನ್ ಅವರನ್ನು ಭಾನುವಾರ ರಾತ್ರಿ 9.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆಯಿಂದಾಗಿ ನುಸ್ರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಆಸ್ತಮಾ ಸಮಸ್ಯೆ ಇದೆ ಎಂದು ಕುಟುಂಬದ ಮೂಲಗಳು ವಿವರಿಸಿದೆ.

ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?

ನುಸ್ರತ್ ಜಹಾನ್ ಬಂಗಾಳದಲ್ಲಿ ಪ್ರಸಿದ್ಧವಾದ ನಟಿ. ಟಿಎಂಸಿ ಟಿಕೆಟ್ ಪಡೆದು, ಬಸಿರ್ ಹತ್ ಲೋಕಸಭಾ ಕ್ಷೇತ್ರದಿಂದ ಗೆದ್ದ ಈ ನಟಿ ಸಂಸತ್ ಮುಂದೆ ವಿದೇಶಿ ಉಡುಗೆ ತೊಟ್ಟು ತೆಗೆಸಿಕೊಂಡ ಫೋಟೋದಿಂದ ಟ್ರೋಲ್ ಆಗಿದ್ದರು. TMCಯ ಮತ್ತೊಬ್ಬ ಸಂಸದೆ ಮಿಮಿ ಚಕ್ರವರ್ತಿ ಸಹ ಸೌಂದರ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತೆ ಇದ್ದಾರೆ.

ಸಂಸತ್ತಿನೆದುರು ಪಾಶ್ಚಾತ್ಯ ಉಡುಗೆ ತೊಟ್ಟು ಪೋಸ್: ಸಂಸದೆಯರು ಟ್ರೋಲ್!

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ಈ ನಟಿ ಕಮ್ ಸಂಸದೆ  ತಮ್ಮ ಲವ್ ಲೈಫ್ ಬಗ್ಗೆಯೂ ರಿವೀಲ್ ಮಾಡಿದ್ದಾರೆ. ತಮ್ಮ ಮದುವೆ ಬಗ್ಗೆಯೂ ಹೇಳಿಕೊಂಡಿದ್ದು, ಈ ವಿಚಾರವಾಗಿ ಹುಟ್ಟಿಕೊಂಡ ಗಾಸಿಪ್‌ಗಳಿಗೆ ಅಂತ್ಯ ಹಾಡಿದ್ದರು.

Follow Us:
Download App:
  • android
  • ios