ಪದ್ಮಾವತಿ ಚಿತ್ರ ಬಿಡುಗಡೆಯನ್ನು ಮುಂದೂಡಲಾದ ಬೆನ್ನಲ್ಲೇ, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರ ಬಿಡುಗಡೆಯೂ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕಾಲಕ್ರಮದಲ್ಲಿ ಚಿತ್ರಗಳ ಪರಿಶೀಲನೆ ನಡೆಸಿ, ಪ್ರಮಾಣಪತ್ರ ನೀಡಲಾಗುವುದು ಎಂದು ಸಿಬಿಎಫ್‌ಸಿ ಹೇಳಿದೆ.

ಮುಂಬೈ: ಪದ್ಮಾವತಿ ಚಿತ್ರ ಬಿಡುಗಡೆಯನ್ನು ಮುಂದೂಡಲಾದ ಬೆನ್ನಲ್ಲೇ, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರ ಬಿಡುಗಡೆಯೂ ವಿಳಂಬವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕಾಲಕ್ರಮದಲ್ಲಿ ಚಿತ್ರಗಳ ಪರಿಶೀಲನೆ ನಡೆಸಿ, ಪ್ರಮಾಣಪತ್ರ ನೀಡಲಾಗುವುದು ಎಂದು ಸಿಬಿಎಫ್‌ಸಿ ಹೇಳಿದೆ.

ಈಗಾಗಲೇ ಪದ್ಮಾವತಿ ಚಿತ್ರ ಬಿಡುಗಡೆ ಅನಿರ್ದಿಷ್ಟಾವಧಿಗೆ ಮುಂದೂಲ್ಪಟ್ಟಿದ್ದು, ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ಚಿತ್ರಕ್ಕೆ ಸಿಬಿಎಫ್‌ಸಿ ಪ್ರಮಾಣಪತ್ರ ವಿತರಣೆ ವಿಳಂಬವಾಗಲಿದೆ. ಅದಕ್ಕಾಗಿ ಟೈಗರ್ ಜಿಂದಾ ಹೈ ಚಿತ್ರ ಡಿ.22ಕ್ಕೆ ತೆರೆ ಕಾಣುವುದು ಅನುಮಾನ ಎನ್ನಲಾಗಿದೆ.

ನೂತನ ನಿಯಮದ ಪ್ರಕಾರ, ಚಿತ್ರ ಬಿಡುಗಡೆ ದಿನಾಂಕದ 68 ದಿನಗಳ ಮುಂಚಿತವಾಗಿಯೇ ಚಿತ್ರವನ್ನು ಸಿಬಿಎಫ್‌ಸಿ ಕಳುಹಿಸಿಕೊಡಬೇಕಿದೆ.