ಜಮ್ಮು-ಕಾಶ್ಮೀರದ ಗಡಿ ರೇಖೆಯಲ್ಲಿರುವ ನೌಶೇರಾ ವಲಯದಲ್ಲಿನ ಪಾಕಿಸ್ತಾನ ಬಂಕರ್‌ಗಳನ್ನು ಧ್ವಂಸ ಮಾಡಿದ ವಿಡಿಯೋಗಳನ್ನು ಭಾರತ ಬಿಡುಗಡೆ ಮಾಡಿದ ಬೆನ್ನಲ್ಲೇ, ಭಾರತದ ಗಡಿ ಪೋಸ್ಟ್‌ಗಳನ್ನು ನಾವೂ ಧ್ವಂಸ ಮಾಡಿದ್ದೇವೆ ಎಂಬ ವಿಡಿಯೋವನ್ನು ಪಾಕಿಸ್ತಾನ ಭದ್ರತಾ ಪಡೆ ಬಿಡುಗಡೆ ಮಾಡಿತ್ತು. ಆದರೆ ಪಾಕ್‌ ಬಿಡುಗಡೆ ಮಾಡಿದ ವಿಡಿಯೋ ನಕಲಿ ಎಂದು ಸಾಬೀತಾಗಿದೆ. ಯುಟ್ಯೂಬ್‌ನಲ್ಲಿ ಇದ್ದ ಹಳೆಯ ವಿಡಿಯೋವನ್ನು ತೆಗೆದು, ಅದನ್ನೇ ಭಾರತದ ಮೇಲೆ ದಾಳಿ ಮಾಡಿದ್ದು ಎಂದು ಪಾಕಿಸ್ತಾನ ಬಿಂಬಿಸಿದೆ. ಇನ್ನೂ ವಿಚಿತ್ರವೆಂದರೆ, ಈ ಹಿಂದೆ ಭಾರತ, ತನ್ನ ಮೇಲೆ ದಾಳಿ ನಡೆಸಿದ್ದ ವಿಡಿಯೋವನ್ನೇ ಪಾಕಿಸ್ತಾನ ತಾನು ಮಾಡಿದ ದಾಳಿಯ ವಿಡಿಯೋ ಎಂದು ತೋರಿಸಿ ತನ್ನ ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಂಡಿದೆ.

ಯೂಟ್ಯೂಬ್‌ ವಿಡಿಯೋ ಕದ್ದು ಭಾರತದ ಮೇಲೆ ದಾಳಿ ಎಂದರು!

ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ರೇಖೆಯಲ್ಲಿರುವ ನೌಶೇರಾ ವಲಯದಲ್ಲಿನ ಪಾಕಿಸ್ತಾನ ಬಂಕರ್‌ಗಳನ್ನು ಧ್ವಂಸ ಮಾಡಿದ ವಿಡಿಯೋಗಳನ್ನು ಭಾರತ ಬಿಡುಗಡೆ ಮಾಡಿದ ಬೆನ್ನಲ್ಲೇ, ಭಾರತದ ಗಡಿ ಪೋಸ್ಟ್‌ಗಳನ್ನು ನಾವೂ ಧ್ವಂಸ ಮಾಡಿದ್ದೇವೆ ಎಂಬ ವಿಡಿಯೋವನ್ನು ಪಾಕಿಸ್ತಾನ ಭದ್ರತಾ ಪಡೆ ಬಿಡುಗಡೆ ಮಾಡಿತ್ತು. ಆದರೆ ಪಾಕ್‌ ಬಿಡುಗಡೆ ಮಾಡಿದ ವಿಡಿಯೋ ನಕಲಿ ಎಂದು ಸಾಬೀತಾಗಿದೆ. ಯುಟ್ಯೂಬ್‌ನಲ್ಲಿ ಇದ್ದ ಹಳೆಯ ವಿಡಿಯೋವನ್ನು ತೆಗೆದು, ಅದನ್ನೇ ಭಾರತದ ಮೇಲೆ ದಾಳಿ ಮಾಡಿದ್ದು ಎಂದು ಪಾಕಿಸ್ತಾನ ಬಿಂಬಿಸಿದೆ. ಇನ್ನೂ ವಿಚಿತ್ರವೆಂದರೆ, ಈ ಹಿಂದೆ ಭಾರತ, ತನ್ನ ಮೇಲೆ ದಾಳಿ ನಡೆಸಿದ್ದ ವಿಡಿಯೋವನ್ನೇ ಪಾಕಿಸ್ತಾನ ತಾನು ಮಾಡಿದ ದಾಳಿಯ ವಿಡಿಯೋ ಎಂದು ತೋರಿಸಿ ತನ್ನ ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಂಡಿದೆ.

ಭಾರತದ ದಾಳಿಯಿಂದ ವಿಶ್ವಸಂಸ್ಥೆ ವಾಹನಕ್ಕೆ ಹಾನಿ ಎಂದದ್ದೂ ಸುಳ್ಳು!

ವಿಶ್ವಸಂಸ್ಥೆ: ಇತ್ತೀಚೆಗೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ನಡೆಸಿದ ಅಪ್ರಚೋದಿತ ದಾಳಿಯ ವೇಳೆ ವಿಶ್ವಸಂಸ್ಥೆಯ ಸೇನಾ ವೀಕ್ಷಕರ ವಾಹನವೂ ಹಾನಿಗೊಳಗಾಗಿತ್ತು ಎಂದು ಪಾಕಿಸ್ತಾನ ಆರೋಪಿಸಿತ್ತು. ಆದರೆ ಈ ಆರೋಪವನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ. ಭಾರತ ಪಡೆಗಳು ನಮ್ಮ ವಾಹನದ ಮೇಲೆ ದಾಳಿಗೆ ಮುಂದಾ ಯಿತು ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರಗಳೇ ಇಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಭಾರತ-ಪಾಕಿಸ್ತಾನ ರಾಷ್ಟ್ರಗಳ ನಡುವೆ ಸೇನಾ ಕಾರ್ಯಾಚರಣೆ ಕುರಿತು ವೀಕ್ಷಣೆ ಮಾಡುತ್ತಿರುವ ವಿಶ್ವಸಂಸ್ಥೆಯ ಸೇನಾ ವೀಕ್ಷಕ ತಂಡದ ವಾಹನದ ಮೇಲೆ ಭಾರತ ಗುಂಡಿನ ದಾಳಿಗೆ ಮುಂದಾಗಿತ್ತು ಎಂಬುದರ ಸಾಕ್ಷ್ಯಾಧಾರವಿಲ್ಲ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೊ ಗುಟೆರ್ರಸ್‌ ಅವರ ವಕ್ತಾರ ಸ್ಟೀಫನ್‌ ಡುಜಾರ್ರಿಕ್‌ ಹೇಳಿದ್ದಾರೆ. 

ಜಾಧವ್‌ ಹಿಡಿದದ್ದು ಇರಾನಲ್ಲಿ: ಪಾಕ್‌ ನಿವೃತ್ತ ಸೇನಾಧಿಕಾರಿ ಹೇಳಿಕೆ

ನವದೆಹಲಿ: ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಬಂಧನ ವಿಚಾರದಲ್ಲೂ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದೆ. ಗೂಢಚರ್ಯೆ ಮತ್ತು ವಿಧ್ವಂಸಕ ಕೃತ್ಯಗಳ ಆರೋಪದಡಿ ಭಾರತದ ಪ್ರಜೆ ಕುಲಭೂಷಣ್‌ ಜಾಧವ್‌ ಅವರನ್ನು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ ಎಂದು ಇಷ್ಟುದಿನಗಳ ಕಾಲ ಪಾಕಿಸ್ತಾನ ಪ್ರತಿಪಾದಿಸುತ್ತಾ ಬಂದಿತ್ತು. ಆದರೆ, ಕುಲಭೂಷಣ್‌ ಜಾಧವ್‌ ಅವರನ್ನು ಇರಾನ್‌ನಲ್ಲಿ ಬಂಧಿಸಲಾಗಿತ್ತು ಎಂಬ ವಿಚಾರವನ್ನು ಪಾಕಿಸ್ತಾನ ಸೇನೆಯ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅಮ್ಜದ್‌ ಶೋಯೆಬ್‌ ಬಾಯ್ಬಿಟ್ಟಿದ್ದಾರೆ. ಭಾರತ ಕೂಡಾ ಹಿಂದಿನಿಂದಲೂ ಜಾಧವ್‌ರನ್ನು ಇರಾನ್‌ನಿಂದ ಅಪಹರಿಸಲಾಗಿತ್ತು ಎಂದು ಆರೋಪಿಸುತ್ತಲೇ ಬಂದಿತ್ತು.

ವರದಿ: ಕನ್ನಡಪ್ರಭ