ನವದೆಹಲಿ (ಅ.06): ಸರ್ಜಿಕಲ್ ದಾಳಿಯು ಚರ್ಚಿತ ವಿಷಯವಾಗಿದ್ದು ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಕೊಡಿ ಎನ್ನುವವರಿಗೆ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿರುಗೇಟು ನೀಡಿದ್ದಾರೆ.
ನಮ್ಮ ಸೈನಿಕರ ಸಾಹಸದ ಬಗ್ಗೆ ಅನುಮಾನ ಬೇಡ. ಸೈನ್ಯದ ಕಾರ್ಯಾಚರಣೆ ಬಗ್ಗೆ ಪುರಾವೆಯನ್ನು ನೀಡಿ ತೊಂದರೆ ಕೊಡಲು ಸರ್ಕಾರ ಮುಂದಾಗುವುದಿಲ್ಲ ಎಂದು ಪರ್ರಿಕರ್ ಸ್ಪಷ್ಟಪಡಿಸಿದ್ದಾರೆ.
ನಮ್ಮ ಸೈನ್ಯದ ಶೌರ್ಯದ ಬಗ್ಗೆ ಯಾರಿಗೂ ಅನುಮಾನವಿಲ್ಲ. ಇತ್ತೀಚಿಗೆ ಕೆಲವರು ನಮ್ಮ ಸೇನೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶಕ್ಕೆ ನಿಷ್ಠರಾಗಿಲ್ಲದ ಕೆಲವರಿಗೆ ಭಾರತೀಯ ಸೇನೆಯನ್ನು ವಿಮರ್ಶಿಸುವುದೇ ಕೆಲಸವಾಗಿದೆ. ಅಂತವರಿಗೆ ನಾವು ಸರ್ಜಿಕಲ್ ದಾಳಿಯ ಬಗ್ಗೆ ಯಾವುದೇ ಪುರಾವೆ ನೀಡುವುದಿಲ್ಲ ಎಂದು ಪರ್ರಿಕರ್ ಖಡಕ್ಕಾಗಿ ಹೇಳಿದ್ದಾರೆ.
