ಇನ್ನೂ ಮದುವೆಯಾಗದ ನನ್ನ ತಂಗಿ ಮಗುವಿಗೆ ಜನ್ಮ ನೀಡಿದ್ರೆ ಜನರು ಏನು ಹೇಳ್ಬಹುದು? ನಾನು ಸಮಾಜದಲ್ಲಿ ಬಾಳಿ ಬದುಕುವುದು ಹೇಗೆ? ಹಲವು ಬಾರಿ ಬೇಡವೆಂದರೂ ತನ್ನ ಪ್ರಿಯತಮನನ್ನು ಭೇಟಿಯಾಗುತ್ತಿದ್ದಳು, ಇಂದು ಅದ್ಯಾವ ಪರಿಸ್ಥಿತಿ ಎದುರಾಗಿದೆ ಎಂದರೆ ಈ ಸಮಸ್ಯೆಯಿಂದ ಹೊರ ಬರಲು ನಾನೇನಾದರೂ ಮಾಡಲೇಬೇಕಿದೆ. ಈ ಎಲ್ಲಾ ಯೋಚನೆಗಳು ಸಹೋದರನೊಬ್ಬ ತಂಗಿಯ ವಿರುದ್ಧ ಭಯಾನಕ ಸಂಚೊಂದನ್ನು ರಚಿಸಿ ತನ್ನ ಮೇಲೆ ಅನುಮಾನ ಮೂಡದಂತೆ ಕೆಲಸ ಮುಗಿಸಿದ್ದ. ಆದರೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಹಾರ(ಜ.15): ಇನ್ನೂ ಮದುವೆಯಾಗದ ನನ್ನ ತಂಗಿ ಮಗುವಿಗೆ ಜನ್ಮ ನೀಡಿದ್ರೆ ಜನರು ಏನು ಹೇಳ್ಬಹುದು? ನಾನು ಸಮಾಜದಲ್ಲಿ ಬಾಳಿ ಬದುಕುವುದು ಹೇಗೆ? ಹಲವು ಬಾರಿ ಬೇಡವೆಂದರೂ ತನ್ನ ಪ್ರಿಯತಮನನ್ನು ಭೇಟಿಯಾಗುತ್ತಿದ್ದಳು, ಇಂದು ಅದ್ಯಾವ ಪರಿಸ್ಥಿತಿ ಎದುರಾಗಿದೆ ಎಂದರೆ ಈ ಸಮಸ್ಯೆಯಿಂದ ಹೊರ ಬರಲು ನಾನೇನಾದರೂ ಮಾಡಲೇಬೇಕಿದೆ. ಈ ಎಲ್ಲಾ ಯೋಚನೆಗಳು ಸಹೋದರನೊಬ್ಬ ತಂಗಿಯ ವಿರುದ್ಧ ಭಯಾನಕ ಸಂಚೊಂದನ್ನು ರಚಿಸಿ ತನ್ನ ಮೇಲೆ ಅನುಮಾನ ಮೂಡದಂತೆ ಕೆಲಸ ಮುಗಿಸಿದ್ದ. ಆದರೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆ ಬಿಹಾರದ ಲಕ್ಷ್ಮೀಪುರ ಎಂಬ ಹಳ್ಳಿಯಲ್ಲಿ ನಡೆದಿದ್ದು, ಈ ಹತ್ಯೆಯ ಹಿಂದಿನ ಸಂಚು ಆರೋಪಿಯಾಗಿರುವ ಯುವತಿಯ ಸಹೋದರ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ ಬಳಿಕ ಬಯಲಾಗಿದೆ. ಈ ಕುರಿತಾಗಿ ಮಾತನಾಡಿದ ಪೊಲೀಸರು ' ಊರಿನ ಜನರೆದುರು ತನ್ನ ಮರ್ಯಾದೆ ಉಳಿಸಿಕೊಳ್ಳಲು ಈತ ಇನ್ನಿಬ್ಬರೊಡನೆ ಕೈ ಮಿಲಾಯಿಸಿ ತನ್ನ ತಂಗಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಒಪ್ಪಿದ್ದಾನೆ. ಹೀಗಾಗಿ ಈತನಿಗೆ ಸಹಾಯ ಮಾಡಿದ ಸಹಚರರನ್ನೂ ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.