ಗೋರಖ್‌’ಪುರದಲ್ಲಿ ಬಿಜೆಪಿ ಸೋಲಲು ಅಖಿಲೇಶ್, ಮಾಯಾವತಿ  ಒಟ್ಟಿಗೆ ಬಂದದ್ದು ಮೊದಲ ಕಾರಣವಾದರೂ ಕೂಡ ಬಿಜೆಪಿಯಲ್ಲಿನ ಬ್ರಾಹ್ಮಣ ಹಾಗೂ ಠಾಕೂರರ ನಡುವಿನ ಜಗಳ ಕೂಡ ಎರಡನೇ ದೊಡ್ಡ ಕಾರಣ ಎನ್ನಲಾಗುತ್ತಿದೆ.

ಲಕ್ನೋ (ಮಾ. 20): ಗೋರಖ್‌’ಪುರದಲ್ಲಿ ಬಿಜೆಪಿ ಸೋಲಲು ಅಖಿಲೇಶ್, ಮಾಯಾವತಿ ಒಟ್ಟಿಗೆ ಬಂದದ್ದು ಮೊದಲ ಕಾರಣವಾದರೂ ಕೂಡ ಬಿಜೆಪಿಯಲ್ಲಿನ ಬ್ರಾಹ್ಮಣ ಹಾಗೂ ಠಾಕೂರರ ನಡುವಿನ ಜಗಳ ಕೂಡ ಎರಡನೇ ದೊಡ್ಡ ಕಾರಣ ಎನ್ನಲಾಗುತ್ತಿದೆ.

ಗೋರಕ್ಷನಾಥ್ ಮಹಂತರು ಅಲ್ಲಿ ಸಕ್ರಿಯವಾಗಿದ್ದೇ ಕಾಂಗ್ರೆಸ್‌’ನಲ್ಲಿನ ಬ್ರಾಹ್ಮಣ ನಾಯಕರ ಆಸ್ತಿತ್ವ ಮುಗಿಯಲು ಕಾರಣ. ಆದರೆ ಈಗ 30 ವರ್ಷಗಳ ನಂತರ ಬಿಜೆಪಿ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದರಿಂದ ಯೋಗಿಯ ಠಾಕೂರ್ ಸಮುದಾಯ ಮುನಿಸಿಕೊಂಡಿತ್ತು. ಠಾಕೂರರು ಮತ ಹಾಕದೇ ಇರುವುದು ಬಿಜೆಪಿ ಸೋಲಿಗೆ ಕಾರಣವಂತೆ. ಉತ್ತರ ಪ್ರದೇಶದಂಥ ಜಾತೀಯ ಸೂಕ್ಷ್ಮ ರಾಜ್ಯದಲ್ಲಿ ಸೋಲಿಗೆ ಹಲವಾರು ಕಾರಣ
ಇರುತ್ತವೆ ಬಿಡಿ.

-ಪ್ರಶಾಂತ್ ನಾತು 

ರಾಜಕಾರಣದ ಬಗ್ಗೆ ಕುತೂಹಲಕಾರಿ ಮಾಹಿತಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ