ನವದೆಹಲಿ (ನ.17): ಹಣಕಾಸು ಅಡಚಣೆಯಿಂದಾಗಿ ದಿನ ನಿತ್ಯದ ಅಗತ್ಯ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ. ಇದು ನೋಟ್​ ಬ್ಯಾನ್​ ಅಲ್ಲ ಇದೊಂದು ದೊಡ್ಡ ಹಗರಣ ಎಂದು ಆಜಾದ್​ಪುರ ಮಂಡಿಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್​​​ ಹೇಳಿದ್ದಾರೆ.

ಕೇಂದ್ರ ಸರ್ಕಾರ ಮಲ್ಯರಂಥ ಉದ್ಯಮಿಗಳ ರಕ್ಷಣೆಗೆ ನಿಂತಿದೆ. ಕಪ್ಪುಹಣ ಇರುವವರ ಹೆಸರುಗಳನ್ನು ಸರ್ಕಾರ ಮೊದಲು ಬಹಿರಂಗಗೊಳಿಸಲಿ. ಕಪ್ಪುಹಣ ತಡೆಯುವ ನೆಪದಲ್ಲಿ ಜನರಿಗೆ ಮೋದಿ ವಂಚಿಸಿದ್ದಾರೆ. ಇದು 8 ಲಕ್ಷ ಕೋಟಿ ಮೌಲ್ಯದ ಭಾರಿ ಹಗರಣ ಎಂದು  ಕೇಜ್ರಿವಾಲ್​ ಆರೋಪಿಸಿದ್ದಾರೆ.

ಜನಾರ್ದನರೆಡ್ಡಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ದುಬಾರಿ ವೆಚ್ಚದಲ್ಲಿ ತಮ್ಮ ಪುತ್ರಿಯ ಮದುವೆ ಮಾಡಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಕೇಂದ್ರ ಹೇಳಲಿ.

ದೇಶದ ಜನಸಾಮಾನ್ಯರು ನಿತ್ಯ ಹಣಕ್ಕಾಗಿ ಬ್ಯಾಂಕ್​​ಗಳ ಮುಂದೆ ನಿಂತು ಪರದಾಡುತ್ತಿದ್ದಾರೆ. ಜನರು ತಮ್ಮ ಮಕ್ಕಳ ಮದುವೆಗೆ ಹಣ ಪಡೆಯಲು ಕಷ್ಟಪಡುತ್ತಿದ್ದಾರೆ.

ಆದರೆ ರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು ಎಂಬುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಲಿ ಕೇಜ್ರಿ ಪ್ರಶ್ನಿಸಿದ್ದಾರೆ.