ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಕೇವಲ 78 ಸ್ಥಾನಗಳನ್ನು ಪಡೆದುಕೊಂಡಿದೆ. ಅಧಿಕಾರ ಕಳೆದುಕೊಳ್ಳುವ ಜತೆ, ಬಹುತೇಕ ಸಚಿವರೂ ಸೋತು ಮನೆಗೆ ಹೋಗಿರುವುದು ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು.  ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ನಂಬರ್ ತಲುಪುವಲ್ಲಿ ವಿಫಲವಾಗಿದೆ.

"

ಇಂಥ ರಾಜಕೀಯ ಪರಿಸ್ಥಿತಿಯಲ್ಲಿ ಯಾರು, ಹಿಂದೆ ಏನು ಹೇಳಿದ್ದರೆಂಬುದನ್ನು ಮೆಲುಕು ಹಾಕುವ ಯತ್ನವಿದು.

ಬಿಎಸ್‌ವೈ ಪ್ರಮಾಣ ವಚನ: ಭಾರತಕ್ಕೆ ಕರಾಳ

ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರಪ್ಪನಾಣೆ ಮುಖ್ಯಮಂತ್ರಿಯಾಗೋಲ್ಲ. ಜಿಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಬೆಂಬಲಿಸಿದಂತೆ,' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಕಡೆ ನಡೆಸಿರುವ ಪ್ರಚಾರ ಸಭೆಗಳಲ್ಲಿ ಪುನರುಚ್ಚರಿಸಿದ್ದರು. 

ಸಿಎಂ ರೇಸ್ ರಾಜಕೀಯ

ಆದರೆ, ಬಿ.ಎಸ್.ಯಡಿಯೂರಪ್ಪ ಅವರು ಎಲ್ಲೆಡೆ 'ನಾನು ಮೇ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಗ್ಯಾರಂಟಿ,' ಎಂದು ಹೇಳುತ್ತಿದ್ದರು.

ಇದೀಗ ಯಡಿಯೂರಪ್ಪ ನೂತನ ಸರಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೆ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಖುದ್ದು ಸಿದ್ದರಾಮಯ್ಯ ಅವರೇ ಶತಾಯಗತಾಯ ಯತ್ನಿಸುತ್ತಿದ್ದಾರೆ. 

ಅಪ್ಪನಾಣೆನೂ ಇಲ್ಲ, ಅಮ್ಮನಾಣೆನೂ ಇಲ್ಲ, ಅಧಿಕಾರದ ಮೇಲೆ ಆಣೆ, ದೇವರಾಣೆ ಅಲ್ಲವೇ?

ತೇಜಸ್ವಿ ಸೂರ್ಯ ಜಯನಗರ ಅಭ್ಯರ್ಥಿ

ರಾಜ್ಯ ರಾಜಕಾರಣದಿಂದ ದೇಶದೆಲ್ಲೆಡೆ ತಲ್ಲಣ