ಬಿಎಸ್‌ವೈ ಪ್ರಮಾಣವಚನ: ಭಾರತಕ್ಕೆ ಇದು ಕರಾಳ ದಿನ

First Published 17, May 2018, 5:19 PM IST
BSY Swearing VS Ugrappa Clims it Black Day of State
Highlights

ಬಿಜೆಪಿ ನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಕೀಳು ಮಟ್ಟಕ್ಕೆ ಇಳಿಯಬಲ್ಲರು. ಮಾತೆತ್ತಿದ್ರೆ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಾರೆ, ಆದರೆ ಗೋವಾ, ಮೇಘಾಲಯದಲ್ಲಿ ಇವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

ಬೆಂಗಳೂರು[ಮೇ.17]: ಜನಾದೇಶಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದು ಭಾರತ ಇತಿಹಾಸದಲ್ಲಿ ಕರಾಳ ದಿನ, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಿಧಾನಪರಿಷತ್ ಸದಸ್ಯ ವಿಎಸ್ ಉಗ್ರಪ್ಪ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು ತಮ್ಮ ಸ್ವಾರ್ಥ ಸಾಧನೆಗಾಗಿ ಕೀಳು ಮಟ್ಟಕ್ಕೆ ಇಳಿಯಬಲ್ಲರು. ಮಾತೆತ್ತಿದ್ರೆ ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಾರೆ, ಆದರೆ ಗೋವಾ, ಮೇಘಾಲಯದಲ್ಲಿ ಇವರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 
ಜನಾದೇಶಕ್ಕೆ ವಿರುದ್ಧವಾಗಿ ಪಿತೂರಿ ನಡೆಸುವವರು ಯಡಿಯೂರಪ್ಪ, ಅಮಿತ್ ಶಾ, ಮೋದಿ ಎಂದು ಕಿಡಿಕಾರಿರುವ ಉಗ್ರಪ್ಪ, ಈ ದೇಶದ ಅತ್ಯಂತ ಸುಳ್ಳುಗಾರ ಮೋದಿ ಅಮಿತ್ ಷಾ ಯಡಿಯೂರಪ್ಪ ಎಂದು ಆರೋಪಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ‌ಬಿಹಾರಿ ವಾಜಪೇಯಿಯನ್ನು ಕೊಂಡಾಡಿರುವ ಉಗ್ರಪ್ಪ ಅವರನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಆದರೆ ಮೋದಿ ಪ್ರಧಾನಿಯಾದ ಮೇಲೆ ಸ್ಟೇಟ್ಸ್’ಮನ್ ಆಗ್ತಾರೆ ಅಂದ್ಕೊಂಡಿದ್ದೆ, ಆದರೆ ಪಿಟಿ ಪೊಲಿಟಿಷಿಯನ್ ಆಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ

loader