ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದು, ಬಹುಮತ ಸಾಬೀತು ಪಡಿಸಲು ಅವರಿಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ಇಷ್ಟು ದಿನಗಳ ಅಗತ್ಯವಿಲ್ಲವೆಂದು ಯಡಿಯೂರಪ್ಪ  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದು, ಬಹುಮತ ಸಾಬೀತು ಪಡಿಸಲು ಅವರಿಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ, ಇಷ್ಟು ದಿನಗಳ ಅಗತ್ಯವಿಲ್ಲವೆಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸೌಧಕ್ಕೆ ಭೇಟಿ ನೀಡಿದ ಯಡಿಯೂರಪ್ಪ, ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಫಲಿತಾಂಶ ಬಂದ ಕಾಂಗ್ರೇಸ್ ಹಾಗೂ ಜೆಡಿಎಸ್ ಪ್ರಜಾತಂತ್ರ ವ್ಯವಸ್ಥೆಗೆ ವಿರೋಧವಾಗಿ ಮಾತನಾಡಿದ್ದಾರೆ,' ಎಂದು ಆರೋಪಿಸಿದರು.

ಸಾಲ ಮನ್ನಾ ಮಾಡುವುದಾಗಿ ಪುನರುಚ್ಚರಿಸಿದ ಅವರು, '2-3 ದಿನಗಳಲ್ಲಿ ಚರ್ಚಿಸಿ ಸಾಲಮನ್ನಾ ಮಾಡಲಾಗುವುದು. 3 ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡುವ ಉದ್ದೇಶವಿದ್ದು, ಅದನ್ನು ಚರ್ಚಿಸಿ, ನಂತರ ಬೆಳೆ ಸಾಲ, ನೇಕಾರರ ಸಾಲ, ಎಸ್‌ಸಿ, ಎಸ್‌ಟಿ ಸಾಲಗಳನ್ನು ಮನ್ನಾ ಮಾಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಲ್ಲ ವಲಯದ ಬೆಳೆ ಸಾಲ ಮನ್ನಾ ಮಾಡುತ್ತೇವೆ,' ಎಂದು ಭರವಸೆ ನೀಡಿದರು.

ಆರ್‌ಎಸ್‌ಎಸ್‌ನಿಂದ ಸಂವಿಧಾನದ ಮೇಲೆ ದಾಳಿ

'ಎಷ್ಟೆಲ್ಲ ಗೊಂದಲ ಸೃಷ್ಟಿಸಿದರೂ, ಕಾಂಗ್ರೆಸ್ ಲಿಂಗಾಯತ ವಿಷ ಬೀಜ ಬಿತ್ತಲು ಯತ್ನಿಸಿದರೂ ಯಾವ ಫಲ ನೀಡಲಿಲ್ಲ. ನಮಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಚಿಂತೆ ಇಲ್ಲ. ವಿಧಾನಸಭೆ ನಡೆಯುವಾಗ ಗೂಂಡಾಗಿರಿ ಮಾಡುವ ಯೋಚನೆ ಕಾಂಗ್ರೆಸ್, ಜೆಡಿಎಸ್ ಮಾಡಿವೆ. ಸರಕಾರ ನಮ್ಮದಿದೆ‌. ಎಲ್ಲವನ್ನೂ ಧೈರ್ಯವಾಗಿ ಎದುರಿಸೋಣ. ಜನ ಅಧಿಕಾರ ಕೊಟ್ಟಿದ್ದು, ಅವರಿಗೆ ನೀಡಿರುವ ಭರವಸೆಯನ್ನು ಈಡೇರಿಸೋಣ,' ಎಂದು ಹೇಳಿದರು.

ರಾಜ್ಯದಲ್ಲಿ ರೆಸಾರ್ಟ್ ರಾಜಕಾರಣ

ಬಿಎಸ್‌ವೈ ಅಧಿಕಾರ ಸ್ವೀಕರಿಸಿದ ಬೆನ್ನೆಲ್ಲೆ ಐಪಿಎಸ್ ಅಧಿಕಾರಿಗಳು ವರ್ಗ