ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ಕೆ.ಎಸ್ ಭಗವಾನ್ ಉಡುಪಿ ಧರ್ಮ ಸಂಸದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ನ.25): ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ಕೆ.ಎಸ್ ಭಗವಾನ್ ಉಡುಪಿ ಧರ್ಮ ಸಂಸದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ದೇಶದ ಅಭಿವೃದ್ಧಿಗಾಗಿ ಹಿಂದೂಗಳು ಸೇರಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಮಹತ್ವ ಕುಗ್ಗಿಸಲು ಕೆಲ ಜನ ಸೇರಿದ್ದಾರೆ. ಶೂದ್ರರು ಅಂದರೆ ವೇಶ್ಯಯರಿಗೆ ಹುಟ್ಟಿದವರು ಎಂದರ್ಥ. ಇದು ಮನು ಸ್ಮೃತಿಯಲ್ಲಿದೆ. ರಾಮನ ಬಾಯಲ್ಲಿ ಬುದ್ಧನನ್ನು ಬೈದಿದ್ದಾರೆ. ಅಯೋಧ್ಯೆ ಕಾಂಡದಲ್ಲಿ ಈ ವಿಷಯ ಇದೆ. ಅಯೋಧ್ಯೆ ಕಾಂಡದ ಪ್ರಕಾರ ಬುದ್ಧ ಒಬ್ಬ ಕಳ್ಳ. ನಾಸ್ತಿಕ. ದೇವಸ್ಥಾನಕ್ಕೆ ಹೋದರೆ ಬುದ್ಧಿವಂತರಾಗಲ್ಲ, ದಡ್ಡರಾಗುತ್ತಾರೆ. ನಾನು ಕುವೆಂಪು ಪುಸ್ತಕ ಓದಿದ ಮೇಲೆ ದೇವಸ್ಥಾನಕ್ಕೆ ಹೋಗೋದನ್ನು ಬಿಟ್ಟೆ. ಸಮಾನಾಂತರ ವಿಚಾರ ಗೋಷ್ಠಿಯಲ್ಲಿ ಪ್ರೊ.ಕೆ.ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಮ್ಮಲ್ಲಿ ಅಸಮಾನತೆ ,ಮೇಲು ಕೀಳು ತುಂಬಿ ತುಳುಕುತ್ತಿದೆ. ನಾವು ಹೋರಾಟ ಮಾಡಿದರೆ ಪಟ್ಟಭದ್ರ ಹಿತಾಶಕ್ತಿಗಳು ದಾಳಿ ಮಾಡುತ್ತವೆ. ಈಗ ಇರುವ ಮೀಸಲಾತಿ ಸರಿಯಲ್ಲ. ಅದು ತಪ್ಪು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು. ಈಗ ಇರುವ 50% ಮೀಸಲಾತಿ ಸಂಪೂರ್ಣವಾಗಿ ಮೋಸದ್ದು. ನಮ್ಮ ದೇಶದಲ್ಲಿ ಡಾ.ಬಿಆರ್.ಅಂಬೇಡ್ಕರ್ ಗಿಂತ ಬುದ್ಧಿವಂತರು ಇದ್ದರಾ? ವಿಶ್ವಸಂಸ್ಥೆ ಅವರ ಬುದ್ಧಿಶಕ್ತಿಯನ್ನು ಗುರ್ತಿಸಿತು, ನೀವು ಮಾಡಿದ್ರಾ? ಇಲ್ಲಿಯವರಿಗೆ ಅಂಬೇಡ್ಕರ್ ಜಾತಿ ಕಾಣುತ್ತದೆಯೆ ವಿನಃ ಬುದ್ಧಿವಂತಿಕೆ ಕಾಣಲಿಲ್ಲ ಎಂದು ಭಗವಾನ್ ಹೇಳಿದ್ದಾರೆ.
ಧರ್ಮಕ್ಕೂ ದಮ್ಮಕ್ಕೂ ತುಂಬಾ ವ್ಯತ್ಯಾಸ ಇದೆ. ಹಿಂದೂಸ್ತಾನವನ್ನೇ ಹಿಂದೂಧರ್ಮ ವೆಂದು ತಿಳಿದು ನೀವು ಒಪ್ಪಿದ್ದೀರಿ. ಇದರ ಬಗ್ಗೆ ಬಸವಣ್ಣ, ಪೆರಿಯರ್ ಹೋರಾಟ ಮಾಡಿದ್ದರು ಎಂದು ಭಗವಾನ್ ಹೇಳಿದ್ದಾರೆ.
