Asianet Suvarna News Asianet Suvarna News

ಕಳ್ಳರ ಕಾಟದಿಂದ ಮೋದಿ ದತ್ತು ಗ್ರಾಮದ ರಸ್ತೆಗಳು ಕಗ್ಗತ್ತಲಲ್ಲಿ

ಪ್ರಧಾನಿ ನರೇಂದ್ರ ಮೋದಿ ಅವರು ದತ್ತು ಪಡೆದಿರುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯಾಪುರ ಗ್ರಾಮದ ಬೀದಿಗಳು ಬೆಳಗುವಂತಾಗಬೇಕು ಎಂದು 2 ವರ್ಷದ ಹಿಂದೆ 135 ಸೌರ ಬೀದಿ ದೀಪ ಅಳವಡಿಸಲಾಗಿತ್ತು. ಈ ಪೈಕಿ 80 ಬೀದಿ ದೀಪಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು, ಗ್ರಾಮದ ಬೀದಿಗಳು ಪುನಃ ಕಾರ್ಗತ್ತಲಿಗೆ ಮರಳಿವೆ. ವಿದ್ಯುತ್ ಕಡಿತದಿಂದ ಬಾಧಿತವಾದ ಜಯಾಪುರದಲ್ಲಿ ವಿದ್ಯುದ್ದೀಪಗಳು ರಾತ್ರಿ ವೇಳೆ ನಿರಂತರವಾಗಿ ರಸ್ತೆಗಳನ್ನು ಬೆಳಗಬೇಕು ಎಂಬ ಉದ್ದೇಶದಿಂದ ಮೋದಿ ಅವರು 135 ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲು ಸೂಚಿಸಿದ್ದರು.

Thief Stolen Solar light in Varanasi

ವಾರಣಾಸಿ (ಜ.18): ಪ್ರಧಾನಿ ನರೇಂದ್ರ ಮೋದಿ ಅವರು ದತ್ತು ಪಡೆದಿರುವ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯಾಪುರ ಗ್ರಾಮದ ಬೀದಿಗಳು ಬೆಳಗುವಂತಾಗಬೇಕು ಎಂದು 2 ವರ್ಷದ ಹಿಂದೆ 135 ಸೌರ ಬೀದಿ ದೀಪ ಅಳವಡಿಸಲಾಗಿತ್ತು. ಈ ಪೈಕಿ 80 ಬೀದಿ ದೀಪಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು, ಗ್ರಾಮದ ಬೀದಿಗಳು ಪುನಃ ಕಾರ್ಗತ್ತಲಿಗೆ ಮರಳಿವೆ. ವಿದ್ಯುತ್ ಕಡಿತದಿಂದ ಬಾಧಿತವಾದ ಜಯಾಪುರದಲ್ಲಿ ವಿದ್ಯುದ್ದೀಪಗಳು ರಾತ್ರಿ ವೇಳೆ ನಿರಂತರವಾಗಿ ರಸ್ತೆಗಳನ್ನು ಬೆಳಗಬೇಕು ಎಂಬ ಉದ್ದೇಶದಿಂದ ಮೋದಿ ಅವರು 135 ಸೌರ ವಿದ್ಯುತ್ ದೀಪಗಳನ್ನು ಅಳವಡಿಸಲು ಸೂಚಿಸಿದ್ದರು.

ಆ ಪ್ರಕಾರ ಇವುಗಳನ್ನು ಅಳವಡಿಸಿಯೂ ಆಗಿತ್ತು. 1 ವರ್ಷದ ಹಿಂದೆ  ಏಕಾಏಕಿ 50 ದೀಪಗಳ ಬ್ಯಾಟರಿಗಳನ್ನು ಕಳ್ಳರು ಕದ್ದರು. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಹೊರಠಾಣೆಯಲ್ಲಿ ದೂರು ಸಲ್ಲಿಸುವ ಹೊತ್ತಿಗೆ ಮತ್ತೆ 30 ಬ್ಯಾಟರಿಗಳನ್ನು ಕದ್ದರು. ಈ ಬಗ್ಗೆ ಎಡಿಜಿ ವಿಶ್ವಜಿತ್ ಮಹಾಪಾತ್ರ ಕಳೆದ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದಾಗ ವಿಷಯವನ್ನು ಪುನಃ ಗ್ರಾಮಸ್ಥರು ಅವರ ಅವಗಾಹನೆಗೆ ತಂದಿದ್ದಾರೆ.

 

 

Follow Us:
Download App:
  • android
  • ios