ಸರ್ಕಾರ ರಾಷ್ಟ್ರಪತಿಗಳ ಭಾಷಣದ ಹೆಸರಲ್ಲಿ ವಿಪಕ್ಷಗಳಿಗೆ ಅವಮಾನ ಮಾಡಿದೆ ಅಂತಾ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಬೆಂಗಳೂರು (ಅ.25): ಸರ್ಕಾರ ರಾಷ್ಟ್ರಪತಿಗಳ ಭಾಷಣದ ಹೆಸರಲ್ಲಿ ವಿಪಕ್ಷಗಳಿಗೆ ಅವಮಾನ ಮಾಡಿದೆ ಅಂತಾ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ವಜ್ರಮಹೋತ್ಸದ ಅದ್ವಾನಗಳನ್ನು ಹೇಳುತ್ತಾ ಹೋದರೆ ಮುಗಿಯೋದೇ ಇಲ್ಲ ಅನ್ಸುತ್ತೆ. ಒಂದೆಡೆ, ಟಿಪ್ಪು ಹೆಸರು ಸೇರಿಸಿದ್ದು ಬಿಜೆಪಿಗರನ್ನ ಕೆರಳಿಸಿದರೆ, ಮತ್ತೊಂದೆಡೆ ರಾಷ್ಟ್ರಪತಿಗಳ ಭಾಷಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಿಂದಿನ ಅನೇಕ ಮುಖ್ಯಮಂತ್ರಿಗಳ ಹೆಸರೇ ಇರಲಿಲ್ಲ. ಆದರೆ ರಾಷ್ಟ್ರಪತಿಗಳೇ ದೇವೇಗೌಡರ ಹೆಸರು ಪ್ರಸ್ತಾಪಿಸಿ ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ. ದೇವೇಗೌಡರು ನನಗೆ ಆತ್ಮೀಯ ಮಿತ್ರರು. ನಾನು ಇಲ್ಲಿ ಕೆಲವರ ಹೆಸರುಗಳನ್ನು ಮಾತ್ರ ಹೇಳುತ್ತಿದ್ದೇನೆ ಎಂದು ನಗುತ್ತಲೇ ಉತ್ತರಿಸಿದರು.
ಇದಕ್ಕೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ಇದು ಸಣ್ಣ ವಿಷಯ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ರೈತನ ಮಗನಾಗಿ ಹುಟ್ಟಿ ರೈತನ ಮಗನಾಗಿ ಸಾಯುತ್ತೇನೆ.ಮಾಜಿ ಪ್ರಧಾನಿ ಎಂಬ ಕಿರೀಟ ಬೇಕಾಗಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ, ಹತ್ತಾರು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತೆ ಆಗಬೇಕಿದ್ದ ವಜ್ರಮಹೋತ್ಸವ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು.
