ಬೆಂಗಳೂರು(ಸೆ.25): ಅಂಗಡಿಗೆ ಖರೀದಿ ನೆಪದಲ್ಲಿ ಬಂದು ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೂ ಆಗಿದ್ದೂ ಅದೇ. ಬೆಂಗಳೂರಿನ ಹೆಣ್ಣೂರು ಸಮೀಪದ ಕನ್ನೂರು ಸುಮುಖ ಫ್ಯಾಷಷನ್ಸ್​​​​ನಲ್ಲಿ ಬಟ್ಟೆ ತೆಗೆದುಕೊಳ್ಳುವ ನೆಪದಲ್ಲಿ ಇಬ್ಬರು ಖದೀಮರು 10 ಸಾವಿರ ಬೆಲೆ ಬಾಳುವ ಬಟ್ಟೆಗಳ ಕದ್ದು ಪರಾರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರ ಚಾಲಾಕಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಲ್ಲಿಕಾರ್ಜುನ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿ ಸೇಲ್ಸ್ ಮೆನ್ ಒಬ್ಬನೇ ಇರುವಾಗ ಈ ಕೃತ್ಯ ನಡೆದಿದೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.