ಅಪರೂಪದ ರಂಗಭೂಮಿ ಕಲಾವಿದ ಕಪ್ಪಣ್ಣ; 70 ರ ಹರೆಯದಲ್ಲೂ ಸದಾ ಸಕ್ರಿಯ

news | Saturday, February 10th, 2018
Suvarna Web Desk
Highlights

ರಂಗಕರ್ಮಿ, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ ಅವರಿಗೀಗ 70 ರ ಹರೆಯ. 69 ಕ್ಕೂ ಹೆಚ್ಚು ಜನಪದ ಜಾತ್ರೆಗಳನ್ನು ಆಯೋಜಿಸಿದ, ದಲಿತ ಕಲಾವಿದರನ್ನು ಮೊದಲ  ಬಾರಿಗೆ ವಿದೇಶಿ  ಫ್ಲೈಟು ಹತ್ತಿಸಿದ, ನಿತ್ಯೋತ್ಸವ ಎಂಬ ಮೊದಲ ಸುಗಮ ಸಂಗೀತ ರಿಯಾಲಿಟಿ ಶೋ ಮೂಲಕ ಹಲವಾರು ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ, ಹಲವಾರು ನಾಟಕ  ನಿರ್ದೇಶಿಸಿದ, ನೂರಾರು ನೃತ್ಯ, ನಾಟಕಗಳಿಗೆ ಲೈಟಿಂಗ್  ಮಾಡಿದ ಬಹುಮುಖ ವ್ಯಕ್ತಿತ್ವದ ಕಪ್ಪಣ್ಣ ‘ಕನ್ನಡ ಪ್ರಭದ ಜೊತೆ ಮಾತಿಗೆ ಸಿಕ್ಕಾಗ,

ಬೆಂಗಳೂರು (ಫೆ.10): ರಂಗಕರ್ಮಿ, ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ.ಕಪ್ಪಣ್ಣ ಅವರಿಗೀಗ 70 ರ ಹರೆಯ. 69 ಕ್ಕೂ ಹೆಚ್ಚು ಜನಪದ ಜಾತ್ರೆಗಳನ್ನು ಆಯೋಜಿಸಿದ, ದಲಿತ ಕಲಾವಿದರನ್ನು ಮೊದಲ  ಬಾರಿಗೆ ವಿದೇಶಿ  ಫ್ಲೈಟು ಹತ್ತಿಸಿದ, ನಿತ್ಯೋತ್ಸವ ಎಂಬ ಮೊದಲ ಸುಗಮ ಸಂಗೀತ ರಿಯಾಲಿಟಿ ಶೋ ಮೂಲಕ ಹಲವಾರು ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ, ಹಲವಾರು ನಾಟಕ  ನಿರ್ದೇಶಿಸಿದ, ನೂರಾರು ನೃತ್ಯ, ನಾಟಕಗಳಿಗೆ ಲೈಟಿಂಗ್  ಮಾಡಿದ ಬಹುಮುಖ ವ್ಯಕ್ತಿತ್ವದ ಕಪ್ಪಣ್ಣ ‘ಕನ್ನಡ ಪ್ರಭದ ಜೊತೆ ಮಾತಿಗೆ ಸಿಕ್ಕಾಗ,

ಕಪ್ಪಣ್ಣ ಅಂದ್ರೆ ಬಹಳ ವಿಸ್ತಾರದ ಕ್ಯಾನ್ವಾಸ್,  ರಂಗಭೂಮಿ, ಸಂಘಟನೆ, ನಾಟಕ, ಲೈಟಿಂಗ್... ಹೀಗೆ  ನಿಮ್ಮ  ಕ್ಷೇತ್ರಗಳು ಹಲವು. ಈ ತೊಡಗಿಸಿಕೊಳ್ಳುವಿಕೆಯ ಹಿಂದಿನ ತುಡಿತ ಏನಿತ್ತು?

ನಾನು ಅತ್ಯಂತ ಬಡತನದ  ಹಿನ್ನೆಲೆಯಿಂದ ಬಂದವನು. ಶಿಕ್ಷಣ ಜಾಸ್ತಿ ಪಡೆದವನಲ್ಲ. ನಿರ್ದಿಷ್ಟ ಪ್ರತಿಭೆ ಅಲ್ಲ. ಈ ಮೂರೂ ಅಲ್ಲದೇ ಇದ್ದಾಗ ನನಗೆ ಗುರುತಿಸಿಕೊಂಡು ಏನಾದರೂ ಕೊಡುಗೆ ಕೊಡಬೇಕು ಅನ್ನುವ ತುಡಿತ. ಹಾಗಾಗಿ ನನ್ನ ಸುತ್ತಮುತ್ತಲ ಸಮಾಜಕ್ಕೆ ಒಳ್ಳೆಯದೆನಿಸುವಂಥ ಕ್ಷೇತ್ರಗಳನ್ನು ಗುರುತಿಸಿದೆ. ಹಾಗಾಗಿ ನಾನು ರಾಜ್ಯದಲ್ಲೇ ಒಬ್ಬ ವಿಶಿಷ್ಟ ಸಂಘಟಕನಾಗಿ ಹೊರಹೊಮ್ಮಿದೆ ಅನಿಸುತ್ತೆ.

 ನಾಟಕ ಮತ್ತು ನೃತ್ಯ ಕ್ಷೇತ್ರ ದಲ್ಲಿ ಲೈಟಿಂಗ್'ಗೆ ಬಹಳ ಹೆಸರಾದವರು ತಾವು. ಈ ಲೈಟಿಂಗ್  ಜರ್ನಿ ಬಗ್ಗೆ ಹೇಳಿ?

ಹಿಂದೊಮ್ಮೆ ಪತ್ರಕರ್ತರೊಬ್ಬರು ಕೇಳಿದರು.  ಎಲ್ಲ ಬಿಟ್ಟು ಲೈಟಿಂಗ್  ಯಾಕೆ  ಆರಿಸಿಕೊಂಡ್ರಿ ಅಂತ. ಯಾಕಂದರೆ ನಮ್ಮ  ಮನೇಲಿ ಕರೆಂಟಿಲ್ಲ ಅಂತ ಅಂದಿದ್ದೆ! ನಮ್ಮ ಮನೆಯಲ್ಲಿಲ್ಲದ  ಲೈಟು ನನ್ನನ್ನು  ದೇಶ ವಿದೇಶಕ್ಕೆ ಕರ್ಕೊಂಡು ಹೋಯ್ತು. ಬಸ್'ಗಿಂತ ಜಾಸ್ತಿ ಫ್ಲೈಟ್'ನಲ್ಲಿ ಓಡಾಡಿದ್ದೀನಿ. ಸಾಕಷ್ಟು ದೇಶ ನೋಡಿದ್ದೀನಿ. ಆದರೆ ಯಾವ  ದೇಶಕ್ಕೂ ಟಿಕೆಟ್ ಕೊಂಡು ಹೋದವನಲ್ಲ. ನಾನು ಲೈಟಿಂಗ್  ಶುರು ಮಾಡುವಾಗ 1968-69ರ ಸುಮಾರು. ಬಿಎಸ್ಸಿ ಫೈನಲ್  ಇಯರ್'ನಲ್ಲಿದ್ದೆ. ಬಡತನಕ್ಕೊಂದು ಉತ್ತರ ಹುಡುಕಬೇಕು ಎಂಬ ಹಿನ್ನೆಲೆಯಲ್ಲಿ ಐಐಟಿ ಮಾಡುವ ಕನಸಿತ್ತು. ಒಮ್ಮೆ ಒಂದು ನಾಟಕಕ್ಕೆ ಲೈಟಿಂಗ್  ಮಾಡ್ತೀನಿ ಅಂತ ತಮಾಷೆಗೆ ಗೆಳೆಯ ನಾಣಿ ಅವರತ್ರ ಹೇಳಿದೆ. ಅವರು ಒಪ್ಪಿದರು. ಲೈಟಿಂಗ್ ಮಾಡಿದೆ. ಆದರೆ ನಾನು ಹಾಕಿ ದ ಲೈಟು ಉರಿಯಲೇ ಇಲ್ಲ! ಎಲ್ಲರೂ  ಬೈದರು. ಕಾಲೇಜಿನಲ್ಲೆಲ್ಲ ಜನಪ್ರಿಯನಾಗಿದವನು ಆಗ ಬದ್ಮಾಶ್ ಆಗಿಟಟ್ಟೆ. ಐಐಟಿ, ಎಕ್ಸಾಂ ಎಲ್ಲಾ ಬಿಟ್ಟೆ. ಬಳಿಕ ತುಘಲಕ್'ಗೆ ಲೈಟಿಂಗ್  ಮಾಡಿದೆ. ಅದು ನನಗೆ ವಿಶಿಷ್ಟ ಅನುಭವ ಕೊಟ್ಟಿತು. ನಂತರ ಹಿಂತಿರುಗಿ ನೋಡ್ಲಿಲ್ಲ. ನಟರಂಗದ ಎಲ್ಲ ನಾಟಕ,  ದೇಶದ ಪ್ರಮುಖ ನೃತ್ಯಪಟುಗಳ ಪ್ರ ದರ್ಶನಕ್ಕೆಲ್ಲ ಲೈಟಿಂಗ್  ಮಾಡುವಂಥ ಅವಕಾಶ ಸಿಕ್ಕಿತು. ಪ್ರತಿಭಾ ಪ್ರಹ್ಲಾದ್ ಅವರ ತಂಡಕ್ಕೆ ನಾನು ಟೆಕ್ನಿಕಲ್ ಡೈರೆಕ್ಟರ್ ಆದೆ. ಅವರು  ದೇಶ-ವಿದೇಶಗಳಲ್ಲೆಲ್ಲ ಡಾನ್ಸ್  ಮಾಡಿದರೂ ನಾನು ಲೈಟಿಂಗ್,  ಸ್ಟೇಜ್ ವಿನ್ಯಾಸ ಮಾಡಲಿಕ್ಕೆ ಹೋಗ್ತಿದ್ದೆ. ಹೀಗೆ ಸುಮಾರು  ಅರ್ಧ ಪ್ರಪಂಚ ಮುಗಿಸಿದ್ದೇನೆ.

ಅವಿಸ್ಮರಣೀಯ ಘಳಿಗೆ?

ಸಿರಿಯಾದಲ್ಲಿ ಪ್ರತಿಭಾ ಪ್ರಹ್ಲಾ ದ ಅವರ ಭರತನಾಟ್ಯ ಪ್ರ ದರ್ಶನ ನಿಗದಿಯಾಗಿತ್ತು. ಆ ದರೆ ಮಸೀದಿಯ ಪಕ್ಕ ದಲ್ಲಿ ದ ಒಂ ದು ಆರ್ಟ್  ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಜಾಗ ಕೊಟ್ಟಿದ್ದರು. ಪ್ರತಿಭಾ ಇದನ್ನು ನೋಡಿ ಬಹಳ  ನಿರಾಶರಾದರು. ನಾನು ಆರ್ಟ್ ಗ್ಯಾಲರಿಯೊಳಗೇ  ಸ್ಟೇಜ್ ಥರ ಏನೂ ಮಾಡದೇ ಅಲ್ಲಿರುವ ಆರ್ಟ್'ಗಳನ್ನೇ ಬಳಸಿಕೊಂಡು ವಿನ್ಯಾಸ ಮಾಡಿದೆ. ಆರ್ಟ್ ಗ್ಯಾಲರಿಯನ್ನು ಹೀಗೂ ಬಳಸಿಕೊಳ್ಳಬಹುದು ಅನ್ನೋದೇ ಅಲ್ಲಿದ್ದವರಿಗೆಲ್ಲ ಅಚ್ಚರಿ ಮೂಡಿಸಿತು. ಸಿರಿಯಾದಂಥ  ದೇಶದಲ್ಲಿ ಆ ಲೈಟಿಂಗ್'ನಲ್ಲಿ ಅದ್ಭುತ ಪ್ರದರ್ಶನ ಕೊಟ್ಟಿದ್ದು ನೆನೆಸಿಕೊಂಡರೆಈಗಲೂ ಥ್ರಿಲ್ ಆಗುತ್ತೆ.

 70 ರ ವಯಸ್ಸಿನಲ್ಲಿ  ನಿಂತು ಈವರೆಗಿನ ದಿನಗಳತ್ತ ತಿರುಗಿ ನೋಡಿ ದ್ರೆ ಏನೆಲ್ಲ ಮನಸ್ಸಿಗೆ ಬರುತ್ತೆ?

ನಾನು ಬಹಳ  ದೊಡ್ಡ ಮೂರ್ಖ ಅಂ ನಿಸುತ್ತೆ. ಒಂ ದು  ನಿರ್ದಿಷ್ಟವಾ ದ ಹಾದಿ ಹಿಡೀಲಿಲ್ಲ ಅಂತ. ಆದರೆ ಗಿರೀಶ್ ಕಾರ್ನಾಡ್'ರಂಥವರಿಂದ ಇಂದಿನ ಚಿಕ್ಕ ಹುಡುಗರವರೆಗೆ ಎಲ್ಲರಿಗೂ ‘ನಮ್ಮ ಕಪ್ಪಣ್ಣನಾದೆ. ಅದು ಬಹಳ ಸಂತೋಷ. ನಾನು ಮಾಸ್ತಿ ಅವರಿಗೆ ಬಹಳ ಆಪ್ತನಾಗಿದ್ದೆ.

ಸಂಘಟಕನಾಗಿ  ನಿಮ್ಮ ಕಾರ್ಯ?

ಟಿ.ಎನ್ ಸೀತಾರಾಂ ಅವರ ಸಂವಾದಕ್ಕೆ 10,000 ಜನರನ್ನು ನಿರ್ವಹಿಸುತ್ತಿ ದೆ. ನಾಟಕ ಅಕಾಡೆಮಿ ಅಧ್ಯಕ್ಷನಾಗಿ ವೃತ್ತಿ ರಂಗಭೂಮಿ ಕಲಾವಿದರಿಗೆ ಶಾಶ್ವತ ಅನು ದಾನ ಕೊಡಿಸೋದು ಸಾಧ್ಯ ಆಯ್ತು. ವಿದೇಶ ದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೆಲವೇ ಕೆಲವು ಖ್ಯಾತ ಕಲಾವಿ ದರು ಹೋಗ್ತಾ ಇರುತ್ತಾರೆ. ನಾನು ಹಠ ಮಾಡಿ  ದಲಿತರನ್ನು ವಿ ದೇಶಕ್ಕೆ ಕಳುಹಿಸಲು ಮುಂ ದಾ ದೆ. ಒಬಟ ರಾಧಾ ಬಾಯಿ ಅನ್ನುವ ಚೌಡಿಕೆ ಪ ದ ಹೇಳುವ  ದೇವ ದಾಸಿ ಮಹಿಳೆ ತನ್ನೂರು ಬಿಟ್ಟು  ಬೆಂಗಳೂರನ್ನೇ ನೋಡಿರಲಿಲ್ಲ. ಅವಳನ್ನು ಅಮೆರಿಕಾಕ್ಕೆ ಕರೆ ದುಕೊಂಡು ಹೋಗಿ ಎಲ್ಲರೆದುರು ಆಕೆ ಹಾಡುವ ಅವಕಾಶ ಕೊಟ್ಟೆ. ಆಕೆಯ ಗಾಯನ ಕೇಳಿ ಅಲ್ಲಿನ ಪ್ರೇಕ್ಷಕರು ಮೂಕ ವಿಸ್ಮಿತರಾದರು. ಮುಂದಿನವರ್ಷ ರಾಯಚೂರಿ ಗಜಲ್  ಗುಂಡಮ್ಮ ಅವರನ್ನು ವಿದೇಶಕ್ಕೆ ಕಳುಹಿಸಲು ನನ್ನ ಗುರು ಎಚ್ .ನರಸಿಂಹಯ್ಯನವರಿಗೆ ಶಿಫಾರಸ್ಸು ಮಾಡಿದೆ. ನಮ್ಮಲ್ಲಿ ಜನಪದ  ಕುಣಿತಗಳಿಗೆ ವೇದಿಕೆಯೇ ಇಲ್ಲ. ಜನಪ ದ ಜಾತ್ರೆ ಮಾಡುವ ಅವಕಾಶ ಸಿಕ್ಕಿದಾಗ ಅವರಿಗೆ ಅವಕಾಶ ಕಲಿಸಿದೆ.

ಜನಪದ ದಿನಾಚರಣೆ ಕಾರ್ಯಕ್ರಮದ ಹೈಲೈಟ್ಸ್ ಏನು?

ಇದುವರೆಗೂ ಮಾಡ ದೇ ಇರುವಷ್ಟು ವಿಜೃಂಭಣೆಯಿಂ ದ ಜನಪದ ದಿನಾಚರಣೆ  ಮಾಡುತ್ತಿದ್ದೇನೆ. ಇನ್ವಿಟೇಶನ್ ಇಲ್ಲ, ಮುಖ್ಯ ಅತಿಥಿ ಇಲ್ಲ, ಸನ್ಮಾನ ಇಲ್ಲ. ನನ್ನ ಜೊತೆಗೆ ಕೆಲಸ ಮಾಡಿ ದವರಿಗೆ, ಅ ದು ಮಾರ್ಗ ದರ್ಶಕರಾಗಿ, ಸಹಾಯಕರಾಗಿ, ಕಲಾಕ್ಷೇತ್ರ ದಲ್ಲಿ ಕಸ ಗುಡಿಸಿದವರು, ಲೈಟಿಂಗ್ ಕಟ್ಟಿದವರಿಗೆಲ್ಲ ಮನೆಗೆ ಕರೆದು ಊಟ ಹಾಕ್ತೀನಿ. ನಟರಂಗ ಕಲಾವಿ ದರು ಸಾಹಿತಿ, ಕಲಾವಿ ದರನ್ನು ಕರೆದಿ ದೆೀನೆ. ಹಿರಿಯ ಸಾಹಿತಿ, ಕಲಾವಿದರನ್ನು ಗೌರವಿಸಲಿದ್ದೇನೆ. ಮತ್ತೇನಿಲ್ಲ, ಈ 70 ವರ್ಷ ದಲ್ಲಿ ಎಲ್ಲೋ ಫುಟ್'ಪಾತ್'ನಲ್ಲಿದ್ದ ವ್ಯಕ್ತಿ ಇವತ್ತು ಕಪ್ಪಣ್ಣ ಆಗಬೇಕಾದರೆ ತುಂಬ ಜನ ಸಹಾಯ ಮಾಡಿದ್ದಾರೆ. ಅವರಿಗೆ ಥ್ಯಾಂಕ್ಸ್  ಹೇಳಬೇಕು ನಾನು ಅನ್ನೋದಷ್ಟೇ.

ಸಂದರ್ಶನ: ಪ್ರಿಯಾ ಕೇರ್ವಾಶೆ

 

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk