ಭಾರತೀಯರು ಹೆಚ್ಚು ತಲೆಕೆಡಿಸಿಕೊಳ್ಳುವುದು ಯಾವ ವಿಷಯಕ್ಕೆ?! ಯುವ ಭಾರತೀಯರನ್ನು ಕಾಡುತ್ತಿರುವ ಸಮಸ್ಯೆಯಾದರೂ ಏನು?! ಗೋಲ್ ಕೀಪರ್ ಗ್ಲೋಬಲ್ ಯುತ್ ಔಟ್‌ಲುಕ್ ನಡೆಸಿದ ಸರ್ವೆ! ನಿರುದ್ಯೋಗ ಸಮಸ್ಯೆ ಭಾರತೀಯರನ್ನು ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ

ನವದೆಹಲಿ(ಸೆ.27): ಅಷ್ಟಕ್ಕೂ ಭಾರತೀಯರು ಯಾವ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ತಾರೆ?. ಮದುವೆ, ಮಕ್ಕಳು, ಸಂಸಾರ, ಖರ್ಚು ವೆಚ್ಚ? ಹೂಂ ಹೂಂ ಇದ್ಯಾವುದಕ್ಕೂ ಅಲ್ಲ.

ಭಾರತೀಯರು ಹೆಚ್ಚು ತಲೆ ಕೆಡಿಸಿಕೊಳ್ಳುವುದು ತಮ್ಮನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಅಂತೆ. ಗೋಲ್ ಕೀಪರ್ ಗ್ಲೋಬಲ್ ಯುತ್ ಔಟ್‌ಲುಕ್ ನಡೆಸಿದ ಸರ್ವೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಸರ್ವೆಯಲ್ಲಿ ಭಾಗವಹಿಸಿದ್ದ ಭಾರತೀಯರ ಪೈಕಿ ಅರ್ಧಕ್ಕೂ ಹೆಚ್ಚು ಜನರು, ತಮ್ಮನ್ನು ನಿರುದ್ಯೋಗ ಅತ್ಯಂತ ಹೆಚ್ಚು ಭಾಧಿಸುವ ಸಮಸ್ಯೆ ಎಂದು ಹೇಳಿಕೊಂಡಿದ್ದಾರಂತೆ.

ಜಾಗತಿಕವಾಗಿ ಒಟ್ಟು 40 ಸಾವಿರ ಯುವಕರನ್ನು ಸಂದರ್ಶನಕ್ಕೊಳಪಡಿಲಾಗಿತ್ತು. ಇದರಲ್ಲಿ ಸುಮಾರು 2,800 ಯುವಕರು ಭಾರತೀಯರಾಗಿದ್ದರು ಎಂದು ಔಟ್‌ಲುಕ್ ತಿಳಿಸಿದೆ.

ಇನ್ನು ಜಾಗತಿಕ ಸರ್ವೆಯಲ್ಲಿ ಜನ ತಮ್ಮ ಸುರಕ್ಷತೆ ಕುರಿತು ಹೆಚ್ಚು ಚಿಂತಾಕ್ರಾಂತರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳು ತಮ್ಮ ಸುರಕ್ಷತೆ ಕರಿತು ಚಿಂತೆ ಮಾಡುವಂತೆ ಮಾಡಿವೆ ಎಂದು ಜನರು ತಿಳಿಸಿದ್ದಾರೆ.