ರೂಟ್ ಮ್ಯಾಪ್ ಕೊಟ್ಟಂತೆ ಮೆರವಣಿಗೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾನೂನು ಉಲ್ಲಂಘಿಸಿದ್ದು ಏಕೆ'

ಬೆಂಗಳೂರು(ಡಿ.04): ಹುಣಸೂರಿನಲ್ಲಿ ಪೊಲೀಸರ ವಿರುದ್ಧ ವರ್ತಿಸಿದ ಸಂಸದ ಪ್ರತಾಪ್ ಸಿಂಹ ನಡವಳಿಕೆಯ ವಿರುದ್ಧ ಗೃಹ ಸಚಿವ ರಾಮಲಿಂಗಾರೆಡ್ಡಿ ಗರಂ ಆಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರು ಪದೇ ಪದೇ ಕಾನೂನು ಮೀರುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಪ್ರತಾಪ್ ಸಿಂಹಾಗೂ ಒಂದೇ ಕಾನೂನು ನನಗೂ ಒಂದೇ ಕಾನೂನು. ರೂಟ್ ಮ್ಯಾಪ್ ಕೊಟ್ಟಂತೆ ಮೆರವಣಿಗೆ ಮಾಡಬೇಕಿತ್ತು. ಅದನ್ನು ಬಿಟ್ಟು ಕಾನೂನು ಉಲ್ಲಂಘಿಸಿದ್ದು ಏಕೆ' ಎಂದು ಪ್ರಶ್ನಿಸಿದರು.

ಗುಂಡೂರಾವ್'ಗೆ ಗೂಂಡಾ ಹೇಳಿಕೆಗೂ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು' ಗುಂಡೂರಾವ್'ಗೆ ಗೂಂಡಾ ಅಂದ್ರೆ ಬಿಜೆಪಿ ಅಧ್ಯಕ್ಷ ಜೈಲಿಗೆ ಹೋಗಿರಲಿಲ್ವಾ? ಬಿಜೆಪಿಯವರ ಬಗ್ಗೆ ಹೇಳ್ತಾ ಹೋದರೆ ಯಾರು ಎಷ್ಟು ಗೂಂಡಾ ಅನ್ನೋದು ಗೊತ್ತಾಗುತ್ತೆ. ಈ ಬಗ್ಗೆ ಮತ್ತೊಮ್ಮೆ ಮಾತನಾಡುತ್ತೇನೆ' ಎಂದು ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.