ಭಾರತದ ಪ್ರತಿಯೊಂದು ರೈಲ್ವೆ ನಿಲ್ದಾಣಕ್ಕೂ ತನ್ನದೇ ಆದ ಇತಿಹಾಸ ಮತ್ತು ವಿಶೇಷತೆಗಳಿವೆ. ಆದ್ರೆ ದೇಶದಲ್ಲಿ ಹೆಸರಿಲ್ಲದ ಒಂದು ರೈಲ್ವೆ ನಿಲ್ದಾಣ ಇದೆ ಅಂದ್ರೆ ನಂಬ್ತೀರಾ? ಹೌದು, ಪ್ಲಾಟ್‌ಫಾರ್ಮ್ ಮುಂದೆ ಇಟ್ಟಿರೋ ಹಳದಿ ಬೋರ್ಡ್ ಇವತ್ತಿಗೂ ಖಾಲಿಯಾಗೇ ಇರೋ ಒಂದು ಸ್ಟೇಷನ್ ಭಾರತದಲ್ಲಿದೆ.
ಭಾರತದ ಪ್ರತಿಯೊಂದು ರೈಲ್ವೆ ನಿಲ್ದಾಣಕ್ಕೂ ತನ್ನದೇ ಆದ ಇತಿಹಾಸ ಮತ್ತು ವಿಶೇಷತೆಗಳಿವೆ. ಆದ್ರೆ ದೇಶದಲ್ಲಿ ಹೆಸರಿಲ್ಲದ ಒಂದು ರೈಲ್ವೆ ನಿಲ್ದಾಣ ಇದೆ ಅಂದ್ರೆ ನಂಬ್ತೀರಾ? ಹೌದು, ಪ್ಲಾಟ್‌ಫಾರ್ಮ್ ಮುಂದೆ ಇಟ್ಟಿರೋ ಹಳದಿ ಬೋರ್ಡ್ ಇವತ್ತಿಗೂ ಖಾಲಿಯಾಗೇ ಇರೋ ಒಂದು ಸ್ಟೇಷನ್ ಭಾರತದಲ್ಲಿದೆ.
ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯಲ್ಲಿದೆ ಈ ಅಪರೂಪದ ರೈಲ್ವೆ ನಿಲ್ದಾಣ. ಬಂಕುರಾ-ಮಸಗ್ರಾಮ್ ರೈಲು ಮಾರ್ಗದಲ್ಲಿ, ಗೋಪಿನಾಥಪುರ-ಪ್ರಬ್ಬಂದ ಹಳ್ಳಿಗಳ ನಡುವೆ ಈ ಸ್ಟೇಷನ್ ಇದೆ. ಇಲ್ಲಿ ಟ್ರೈನ್‌ಗಳು ನಿಲ್ಲುತ್ತವೆ, ಪ್ರಯಾಣಿಕರು ಹತ್ತಿ ಇಳೀತಾರೆ, ಆದ್ರೂ, ಈ ಸ್ಟೇಷನ್‌ಗೆ ಇವತ್ತಿನವರೆಗೂ ಅಧಿಕೃತವಾಗಿ ಹೆಸರಿಟ್ಟಿಲ್ಲ.
ಜಗಳದ ಜೇನುಗೂಡಾದ ನಿಲ್ದಾಣದ ಹೆಸರು!
2008ರಲ್ಲಿ ಬಂಕುರಾ-ಮಸಗ್ರಾಮ್ ರೈಲ್ವೆ ಲೈನ್‌ನಲ್ಲಿ ಒಂದು ಹೊಸ ಸ್ಟೇಷನ್ ರೆಡಿ ಆದಾಗ ಈ ಇಂಟರೆಸ್ಟಿಂಗ್ ಕಥೆ ಶುರುವಾಯ್ತು. ಈ ಸ್ಟೇಷನ್ ರೈನಾ ಮತ್ತು ರೈನಾಗಢ್ ಅನ್ನೋ ಎರಡು ಹಳ್ಳಿಗಳ ಮಧ್ಯದಲ್ಲಿತ್ತು. ಆರಂಭದ ಪೇಪರ್ ವರ್ಕ್ ಮತ್ತು ಕಟ್ಟಡ ಕೆಲಸದ ನಂತರ, ರೈಲ್ವೆಯವರು ಸ್ಟೇಷನ್‌ಗೆ ರೈನಾಗಢ್ ಅಂತ ಹೆಸರಿಡೋಕೆ ಡಿಸೈಡ್ ಮಾಡಿದ್ರು. ಸೈನ್‌ಬೋರ್ಡ್‌ನಲ್ಲೂ ಅದೇ ಹೆಸರಿತ್ತು. ಸ್ಟೇಷನ್‌ಗೆ ತಮ್ಮೂರಿನ ಹೆಸರು ಬಂದಿದ್ದಕ್ಕೆ ರೈನಾಗಢ್ ಜನರಿಗೆ ಖುಷಿಯಾಗಿತ್ತು. ಆದ್ರೆ ಈ ಖುಷಿ ಹೆಚ್ಚು ದಿನ ಉಳೀಲಿಲ್ಲ.
ಬೋರ್ಡ್ ಮೇಲೆ ರೈನಾಗಢ್ ಹೆಸರು ಬಂದ ತಕ್ಷಣ, ಪಕ್ಕದ ರೈನಾ ಹಳ್ಳಿಯ ಜನ ಪ್ರತಿಭಟನೆ ಶುರು ಮಾಡಿದರು. ಸ್ಟೇಷನ್ ಮತ್ತು ಪ್ಲಾಟ್‌ಫಾರ್ಮ್ ಕಟ್ಟಿರೋ ಜಾಗ ನಮ್ಮದು ಅಂತ ಗ್ರಾಮಸ್ಥರು ಹೇಳಿದ್ರು. ಜಾಗ ನಮ್ಮದಾದ್ರೆ, ಸ್ಟೇಷನ್‌ಗೆ ಯಾಕೆ ರೈನಾಗಢ್ ಅಂತ ಹೆಸರಿಟ್ರಿ ಅಂತ ವಾದಿಸಿದ್ರು. ಸ್ಟೇಷನ್ ಹೆಸರನ್ನ ರೈನಾ ಅಂತ ಬದಲಾಯಿಸಬೇಕು ಅಂತ ಡಿಮ್ಯಾಂಡ್ ಮಾಡಿದ್ರು. ನಿಧಾನವಾಗಿ, ಜಗಳ ದೊಡ್ಡದಾಗಿ ಎರಡು ಹಳ್ಳಿಗಳ ನಡುವೆ ಸಂಘರ್ಷಕ್ಕೆ ಕಾರಣವಾಯ್ತು ಮತ್ತು ವಿಷಯ ರೈಲ್ವೆ ಬೋರ್ಡ್‌ಗೆ ಹೋಯಿತು.
ರೈಲ್ವೆ ಇಲಾಖೆಯ ವಿಚಿತ್ರ ನಿರ್ಧಾರ:
ರೈಲ್ವೆ ಅಧಿಕಾರಿಗಳು ಎರಡೂ ಕಡೆಯವರನ್ನು ಸಮಾಧಾನಪಡಿಸಲು ತುಂಬಾ ಪ್ರಯತ್ನಿಸಿದ್ರೂ, ಯಾವ ಹಳ್ಳಿಯೂ ಹಿಂದೆ ಸರಿಯೋಕೆ ರೆಡಿ ಇರ್ಲಿಲ್ಲ. ಸಮಸ್ಯೆ ಬಗೆಹರಿಯೋ ಬದಲು, ಅದು ಇನ್ನೂ ಕಾಂಪ್ಲೆಕ್ಸ್ ಆಗಿ ಕೊನೆಗೆ ಕೋರ್ಟ್‌ಗೆ ಹೋಯ್ತು. ದಿನನಿತ್ಯದ ಜಗಳ, ಗಲಾಟೆಯಿಂದ ಬೇಸತ್ತ ರೈಲ್ವೆಯವರು ಒಂದು ವಿಚಿತ್ರ ನಿರ್ಧಾರ ತೆಗೆದುಕೊಂಡರು. ಆಮೇಲೆ ಅಧಿಕಾರಿಗಳು ಸ್ಟೇಷನ್‌ನ ಹಳದಿ ಬೋರ್ಡ್‌ನಿಂದ ರೈನಾಗಢ್ ಹೆಸರನ್ನ ಪೂರ್ತಿಯಾಗಿ ತೆಗೆದುಹಾಕಿದ್ರು. ಇವತ್ತಿಗೂ ಇಲ್ಲಿ ಟ್ರೈನ್‌ಗಳು ನಿಲ್ಲುತ್ತವೆ, ಪ್ರಯಾಣಿಕರು ಹತ್ತಿ ಇಳೀತಾರೆ. ಆದ್ರೆ ಆ ಹಳದಿ ಬೋರ್ಡ್ ಹಾಗೆಯೇ ಖಾಲಿ ಉಳಿದಿದೆ.
ಸೋಶಿಯಲ್ ಮೀಡಿಯಾ ಮತ್ತು ಟ್ರಾವೆಲ್ ಬ್ಲಾಗ್‌ಗಳಲ್ಲಿ ಈ ಸ್ಟೇಷನ್‌ನ ಫೋಟೋಗಳು ವೈರಲ್ ಆಗ್ತಿದ್ದಂತೆ, ಹೆಸರಿಲ್ಲದ ಈ ಸ್ಟೇಷನ್ ಒಂದು ಸಣ್ಣ ಟೂರಿಸ್ಟ್ ಸ್ಪಾಟ್ ಆಗಿದೆ. ಹಳದಿ ಬೋರ್ಡ್ ಮುಂದೆ ನಿಂತು ಫೋಟೋ ತೆಕ್ಕೊಳ್ಳೋದು ಇವತ್ತು ತುಂಬಾ ಜನರಿಗೆ ಒಂದು ಕುತೂಹಲದ ವಿಷಯವಾಗಿದೆ.


