ಇಡೀ ವ್ಯವಸ್ಥೆ ಬುಡಮೇಲು ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದ ಬೆಂಗಳೂರು ಅಂಡರ್ ವರ್ಲ್ಡ್ ಈಗ ಅಲುಗಾಡ ತೊಡಗಿದೆ. ಕಡಬಗೆರೆ ಸೀನನ ಶೂಟೌಟ್ ಪ್ರಕರಣ ಬೆನ್ನತ್ತಿರುವ ಪೊಲೀಸರು ಭೂಗತ ಪಾತಕಿಗಳ ಬುಡಕ್ಕೆ ಕೈ ಹಾಕಿದ್ದಾರೆ. ಪೊಲೀಸ್ ಪವರ್ ಗೆ ಬೆದರಿದ ರೌಡಿಗಳು ಊರು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಬೆಂಗಳೂರು(ಫೆ.10): ಇಡೀ ವ್ಯವಸ್ಥೆ ಬುಡಮೇಲು ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದ ಬೆಂಗಳೂರು ಅಂಡರ್ ವರ್ಲ್ಡ್ ಈಗ ಅಲುಗಾಡ ತೊಡಗಿದೆ. ಕಡಬಗೆರೆ ಸೀನನ ಶೂಟೌಟ್ ಪ್ರಕರಣ ಬೆನ್ನತ್ತಿರುವ ಪೊಲೀಸರು ಭೂಗತ ಪಾತಕಿಗಳ ಬುಡಕ್ಕೆ ಕೈ ಹಾಕಿದ್ದಾರೆ. ಪೊಲೀಸ್ ಪವರ್ ಗೆ ಬೆದರಿದ ರೌಡಿಗಳು ಊರು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಬೆಂಗಳೂರಿನಲ್ಲಿರುವ ಸೋ ಕಾಲ್ಡ್ ರೌಡಿಗಳಿಗೆ ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬಹು ವರ್ಷಗಳಿಂದಲೂ ಯಾರೂ ಕೂಡ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲ ಎಂದು ನಗರದಲ್ಲಿ ಬಲವಾಗಿ ಬೇರೂರಿರಿರುವ ಪಾತಕಿಗಳಿಗೆ ಖಾಕಿ ಖದರ್ ನಿದ್ದೆಗೆಡಿಸಿದೆ. ಪೊಲೀಸರ ಪವರ್'ಗೆ ಅಂಡರ್ ವರ್ಲ್ಡ್ ಶೇಕ್ ಆಗಿ ಹೋಗಿದೆ.
ಕಡಬಗೆರೆ ಸೀನನ ಶೂಟೌಟ್ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬೆಂಗಳೂರು ಅಂಡರ್ ವರ್ಲ್ಡ್ ಗೆ ಕೈ ಹಾಕಿದ್ದಾರೆ. ಅದು ನಗರದ ಸೋ ಕಾಲ್ಡ್ ರೌಡಿಗಳಿಗೆ ನಡುಕ ಉಂಟು ಮಾಡಿದೆ. ಮಾಜಿ ಅಂಡರ್ ವರ್ಲ್ಡ್ ಡಾನ್ ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ನಡೆಸಿ, ಬಚ್ಚನ್, ಸೈಲೆಂಟ್ ಸುನಿಲಾ, ಒಂಟೆ ಸೇರಿ ಹಲವು ನಟೋರಿಯಸ್ ರೌಡಿಗಳನ್ನು ಬಂಧಿಸಿರುವ ಪೊಲೀಸರ ಎದೆಗಾರಿಕೆಗೆ ಅಂಡರ್ ವರ್ಲ್ಡ್ ಅದುರಿ ಹೋಗಿದೆ.
ಮುಂದುವರೆದ ನಟೋರಿಯಸ್ ರೌಡಿಗಳ ಬೇಟೆ: ಪೊಲೀಸರ ಭಯಕ್ಕೆ ಊರು ಬಿಟ್ಟ ರೌಡಿಗಳು
ಕಳೆದ ಒಂದು ವಾರದಿಂದ ಪೊಲೀಸರು ಮೇಲಿಂದ ಮೇಲೆ ರೌಡಿಗಳನ್ನು ಬಂಧಿಸಿ ಶಾಕ್ ನೀಡುತ್ತಿದ್ದಾರೆ. ಇದರಿಂದ ಅದುರಿ ಹೋಗಿರುವ ಸೋ ಕಾಲ್ಡ್ ರೌಡಿಗಳು ಸರ್ಜಾಪುರ ರಸ್ತೆಯ ಕಟ್ಟಡವೊಂದರಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆಗಾಗಿ ಸಭೆ ಸೇರಿದ್ದರು. ಈ ವೇಳೆ ಅಲ್ಲಿಗೆ ಖಾಕಿ ದಾಳಿ ನಡೆಸಿದ್ದೇ ತಡ ರೌಡಿಗಳು ಊರು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಸಭೆಯಲ್ಲಿದ್ದ ನಾಲ್ವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ರಾಜಕೀಯ ಬಲ, ಪೊಲೀಸರ ಸಪೋರ್ಟ್ ನಿಂದ ಮೆರೆಯುತ್ತಿದ್ದ ರೌಡಿಗಳಿಗೆ ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅಂಡ್ ಟೀಂ ಬಿಸಿ ನೀರು ಕಾಯಿಸುತ್ತಿದೆ. ಅಂಡರ್ ವರ್ಲ್ಡ್ - ಪೊಲೀಸ್ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
