ಟೆಲಿಕಾಂ ಕ್ಷೇತ್ರದಲ್ಲಿ ಮತ್ತೆ 90 ಸಾವಿರ ಉದ್ಯೋಗಕ್ಕೆ ಕತ್ತರಿ

news | Tuesday, January 16th, 2018
Suvarna Web Desk
Highlights

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಕೂಗಿನ ನಡುವೆಯೇ, ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ವಲಯವಾಗಿದ್ದ ಟೆಲಿಕಾಂ ಇದೀಗ ಭಾರೀ ಸಂಕಷ್ಟಕ್ಕೆ ಸಿಲುಕಿದೆ.

ಮುಂಬೈ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂಬ ಕೂಗಿನ ನಡುವೆಯೇ, ಇತ್ತೀಚಿನ ವರ್ಷಗಳಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ವಲಯವಾಗಿದ್ದ ಟೆಲಿಕಾಂ ಇದೀಗ ಭಾರೀ ಸಂಕಷ್ಟಕ್ಕೆ ಸಿಲುಕಿದೆ.

ವಲಯದಲ್ಲಿ ಮುಂದಿನ 6ರಿಂದ 9 ತಿಂಗಳ ಅಂತರದಲ್ಲಿ ಕನಿಷ್ಠ 80000 ದಿಂದ 90000 ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸೀಲ್ ಎಚ್‌ಆರ್ ಸರ್ವೀಸಸ್ ಕಂಪನಿ ವರದಿಯಲ್ಲಿ ಈ ಮಾಹಿತಿ ಇದೆ.

ವರದಿ ಪ್ರಕಾರ ಕಳೆದ ವರ್ಷದಿಂದ ಈಗಾಗಲೇ 40000 ಮಂದಿ ಉದ್ಯೋಗ ವಂಚಿತ ರಾಗಿದ್ದಾರೆ. ಇದೇ ಟ್ರೆಂಡ್ ಮತ್ತಷ್ಟು ತಿಂಗಳು ಮುಂದುವರಿಯಲಿದೆ ಎನ್ನಲಾಗಿದೆ.

Comments 0
Add Comment