ಹೈದರಾಬಾದ್(ಸೆ.3): ಮಕ್ಕಳು ಸಮಾಜದಲ್ಲಿ ತನಗಿಂತ ಉನ್ನತ ಸ್ಥಾನ, ಹೆಚ್ಚಿನ ಗೌರವ ಗಳಿಸಿದಾಗಲೇ ತಂದೆಗೆ ಸಮಾಧಾನ. ಎದೆಯುದ್ದ ಬೆಳೆದ ಮಗ ಅಥವಾ ಮಗಳು ತನ್ನನ್ನು ಮೀರಿಸಿದಾಗ ತಂದೆಯ ಎದೆ ಹೆಮ್ಮೆಯಿಂದ ಉಬ್ಬುತ್ತದೆ.

ಅದರಲ್ಲೂ ತನ್ನದೇ ವೃತ್ತಿಯಲ್ಲಿ ತನ್ನ ಕರುಳಿನ ಕುಡಿ ಉನ್ನತ ಸ್ಥಾನಕ್ಕೇರಿದಾಗ ತಂದೆಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ನಿನ್ನೆ ತಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದ ಟಿಆರ್ ಎಸ್ ಪಕ್ಷದ ಸಮಾವೇಶದಲ್ಲಿ ಇಂತದ್ದೇ ಅಪರೂಪದ ಘಟನೆಯೊಂದು ನಡೆದಿದೆ.

ಟಿಆರ್‌ಎಸ್ ಆಯೋಜಿಸಿದ್ದ ಪ್ರಗತಿ ನಿವೇದನಾ ಸಮಾವೇಶದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಾದ ತಂದೆ ಮತ್ತು ಮಗಳ ಅಪೂರ್ವ ಸಂಗಮ ಇಡೀ ದೇಶದ ಗಮನ ಸೆಳೆದಿದೆ.

ಬ್ರಿಟಿಷರ ಕಾಲದ ರೈಫಲ್ಸ್‌ಗೆ ಗುಡ್ ಬೈ

ಇಲ್ಲಿನ ಮಲ್ಕಾಜಗಿರಿ ಡಿಸಿಪಿ ಉಮಾಮಹೇಶ್ವರ್ ಶರ್ಮಾ ಮತ್ತು ಜಗಿತಾಲ್ ಜಿಲ್ಲೆಯ ಎಸ್‌ಪಿ  ಸಿಂಧೂ ಶರ್ಮಾ ನಿನ್ನೆಯ ಪ್ರಗತಿ ನಿವೇದನಾ ಸಭೆಯಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳು. ಎಸ್‌ಪಿ ಸಿಂಧೂ ಶರ್ಮಾ ಡಿಸಿಪಿ ಉಮಾಮೇಶ್ವರ್ ಶರ್ಮಾ ಅವರ ಸ್ವಂತ ಮಗಳು ಕೂಡ ಹೌದು.

ಪೊಲೀಸ್ ಸಮವಸ್ತ್ರದಲ್ಲಿದ್ದ ಉಮಾಮೇಶ್ವರ್, ತಮಗಿಂತ ಹಿರಿಯ ಅಧಿಕಾರಿ ಸಿಂಧೂ ಶರ್ಮಾ ಅವರನ್ನು ಕಂಡೊಡನೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ. ಎಸ್‌ಪಿ ಸಿಂಧೂ ಕೂಡ ಅಷ್ಟೇ ಖಡಕ್ ಆಗಿ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ.

ಕಾಂಡೋಮ್ ಬಳಸು ಎಂದ ವೇಶ್ಯೆ ಕೊಂದವ ಈಗ ಅಂದರ್

ಇದಾದ ಕಲೆವೇ ಕ್ಷಣದಲ್ಲಿ ಇಬ್ಬರೂ ಪರಸ್ಪರರನ್ನು ಕಂಡು ನಗೆ ಬೀರಿದ್ದಾರೆ. ತಂದೆ ಮಗಳ ಈ ಜುಗಲ್‌ಬಂದಿ ಕಂಡು ನೆರೆದವರೆಲ್ಲಾ ಚಪ್ಪಾಳೆ ತಟ್ಟಿ ಆನಂದಿಸಿದರು.